ನವದೆಹಲಿ: ಭಾರತದ ಯೋಗ ಈಗ ವಿಶ್ವದಲ್ಲೇ ಜನಮನ್ನಣೆ ಪಡೆದಿದೆ. ಇತ್ತೀಚೆಗಿನ ಕೆಲ ವರ್ಷಗಳಿಂದ ಪ್ರತೀವರ್ಷ ಜೂ.21ರಂದು ವಿಶ್ವ ಯೋಗ ದಿನಾಚರಣೆ ನಡೆಯುತ್ತಿದೆ.
ಇದೀಗ ರಾಷ್ಟ್ರೀಯ ಯೋಗ ಕ್ರೀಡಾ ಒಕ್ಕೂಟ (ಎನ್‌ವೈಎಸ್‌ಎಫ್) ಮುಂದಿನ ವರ್ಷ ಜೂನ್ ತಿಂಗಳಲ್ಲಿ ವಿಶ್ವ ಯೋಗ ಚಾಂಪಿಯನ್‌ಶಿಪ್ ನಡೆಸಲು ಉದ್ದೇಶಿಸಿದೆ.
ಯೋಗದ ಬೆಳವಣಿಗೆಗಾಗಿ, ಯೋಗ ಸಂಸ್ಕೃತಿಯನ್ನು ಉತ್ತೇಜಿಸಲು, ದೈಹಿಕ ಸಕ್ಷಮತೆಗೆ, ಪ್ರತಿಯೊಬ್ಬರ ಜೀವನ ಉತ್ತಮಗೊಳ್ಳಲು, ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಈ ಕೂಟ ನಡೆಸಲಾಗುತ್ತದೆ.
ಇದನ್ನೂ ಓದಿ:ಮುಂದಿನ ವರ್ಷ 5 ಜಿ ಸ್ಪೆಕ್ಟ್ರಂ ಹರಾಜು: ಸಚಿವ ಅಶ್ವಿನಿ ವೈಷ್ಣವ್
ಒಡಿಶಾದ ಭುವನೇಶ್ವರದಲ್ಲಿ ಉದ್ಘಾಟನೆಯಾದ ಭಾರತದ ಮೊದಲ ರಾಷ್ಟ್ರೀಯ ಯೋಗಾಸನ ಕ್ರೀಡಾಕೂಟದಲ್ಲಿ ಉದಿತ್ ಸೇಠ್ ಈ ಮಾಹಿತಿ ನೀಡಿದರು. ಈಗಾಗಲೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಯೋಗಾಸನಕ್ಕೆ ಕ್ರೀಡಾ ಮಾನ್ಯತೆ ನೀಡಿ ಸೇರಿಸಿಕೊಳ್ಳಲಾಗಿದೆ.