Advertisement

ಜನವರಿಯಲ್ಲಿ ಭಾರತದಲ್ಲಿ  3 ಬ್ಯಾಡ್ಮಿಂಟನ್‌ ಕೂಟಗಳು!

10:27 PM Oct 28, 2021 | Team Udayavani |

ಹೊಸದಿಲ್ಲಿ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಭಾರತದಲ್ಲಿ ಬಹುತೇಕ ಬ್ಯಾಡ್ಮಿಂಟನ್‌ ಕೂಟಗಳು ರದ್ದಾಗಿದ್ದವು. ಮುಂದಿನ ವರ್ಷ ಒಂದರ ಬೆನ್ನಿಗೆ ಒಂದರಂತೆ  ಒಟ್ಟು 3 ಕೂಟಗಳು ನಡೆಯುವುದು ಖಾತ್ರಿಯಾಗಿದೆ. ಬಿಡಬ್ಲ್ಯೂಎಫ್ (ಬ್ಯಾಡ್ಮಿಂಟನ್‌ ವಿಶ್ವ ಒಕ್ಕೂಟ) ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಜ.11ರಿಂದ 16ರವರೆಗೆ ಮೊದಲ ಕೂಟವಾಗಿ ಇಂಡಿಯಾ ಓಪನ್‌ ಸೂಪರ್‌ 500 ನಡೆಯಲಿದೆ.

Advertisement

ಸೈಯದ್‌ ಮೋದಿ ಸೂಪರ್‌ 300 ಕೂಟ ಜ.18ರಿಂದ 23ರವರೆಗೆ ನಡೆಯಲಿದೆ. ಅನಂತರ ಜ.25ರಿಂದ 30ರವರೆಗೆ ಒಡಿಶಾ ಓಪನ್‌-100 ಕೂಟ ನಡೆಯಲಿದೆ. ಈ ಪಟ್ಟಿಯಲ್ಲಿ ಕಳೆದ ವರ್ಷ ರದ್ದಾಗಿದ್ದ ಹೈದರಾಬಾದ್‌ ಓಪನ್‌ ಸೂಪರ್‌-100 ಕೂಟ ಕಾಣಿಸಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next