Advertisement
ಈ ಶೃಂಗವು “ಅಭೂತಪೂರ್ವ ಮತ್ತು ವಿಶಿಷ್ಟವಾದ ಭಾರತೀಯ ಅಸ್ಮಿತೆ’ಯನ್ನು ಹೊಂದಿರಲಿದ್ದು, ಬ್ರ್ಯಾಂಡ್ ಇಂಡಿಯಾವನ್ನು ಜಗತ್ತಿಗೇ ತೋರಿಸಿಕೊಡುವ ಪ್ರಯತ್ನ ಇದಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ವಾರಾಂತ್ಯದಲ್ಲಿ ಜಿ20ಯ ಸದಸ್ಯ ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳು ಉದಯಪುರದಲ್ಲಿ ಸಭೆ ಸೇರುವ ಸಾಧ್ಯತೆಯಿದೆ.
ಭಯೋತ್ಪಾದನೆ ನಿಗ್ರಹ, ಆರ್ಥಿಕ ಚೇತರಿಕೆ, ಪೂರೈಕೆ ಸರಪಳಿಯಲ್ಲಿನ ಅಡ್ಡಿ ಸರಿಪಡಿಸುವುದು, ಎಲ್ಲರನ್ನೊಳಗೊಂಡ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸುವುದು, ಹವಾಮಾನ ಬದಲಾವಣೆ, ವಿವಿಧ ದೇಶಗಳ ಸಾಲದ ಸಮಸ್ಯೆ, ಬ್ರೆಟ್ಟನ್ ವುಡ್ಸ್ ಇನ್‌ಸ್ಟಿಟ್ಯೂಷನ್ಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನಂಥ ಸಂಸ್ಥೆಗಳಲ್ಲಿ ಸುಧಾರಣೆ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಭಜನೆಗೊಂಡಿರುವ ದೇಶಗಳನ್ನು ಬೆಸೆಯುವ ಸೇತುವಾಗಿ ಕೆಲಸ ಮಾಡುವುದು ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
Related Articles
– ದೇಶದ ಎಫ್ಎಂ ರೇಡಿಯೋಗಳಿಗೆಂದೇ ವಿಶೇಷವಾದ ಜಿ-20 ಜಿಂಗಲ್ ಅನಾವರಣ
– ದೇಶದ 100 ಸ್ಮಾರಕಗಳಲ್ಲಿ “ಜಿ20 ಲೋಗೋ’ದ ವಿಶೇಷ ಲೈಟಿಂಗ್ ವ್ಯವಸ್ಥೆ
– ಶೃಂಗಕ್ಕೆ ಸಂಬಂಧಿಸಿದ ವಿಶೇಷ ಆಡಿಯೋ-ವಿಡಿಯೋ ಕ್ಲಿಪ್‌ಗ್ಳ ಬಿಡುಗಡೆ
– ಜಿ-20 ಲೋಗೋದೊಂದಿಗೆ ಸೆಲ್ಫಿ ಎಂಬ ಸ್ಪರ್ಧೆ
– ನಾಗಾಲ್ಯಾಂಡ್‌ನ ಜನಪ್ರಿಯ ಹಾರ್ನ್ಬಿಲ್ ಉತ್ಸವದ ಪ್ರದರ್ಶನ
– ಪುರಿಯಲ್ಲಿ ಮರಳುಶಿಲ್ಪಿಗಳಿಂದ ಜಿ-20 ಲೋಗೋದ ಮರಳುಶಿಲ್ಪ ರಚನೆ
– ಶಾಲೆಗಳಲ್ಲಿ ಜಿ20 ಕುರಿತ ವಿವಿಧ ಕಾರ್ಯಕ್ರಮಗಳ ಆಯೋಜನೆ
– 75 ಕಾಲೇಜು, ವಿವಿಗಳ ವಿದ್ಯಾರ್ಥಿಗಳೊಂದಿಗೆ ವಿದೇಶಾಂಗ ಸಚಿವ ಜೈಶಂಕರ್ ಸಂವಾದ
Advertisement