Advertisement

ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ದಾಖಲೆ ಸಂಖ್ಯೆಯ ವೈದ್ಯರು ಲಭ್ಯ: ಪ್ರಧಾನಿ ಮೋದಿ

06:35 PM Apr 15, 2022 | Team Udayavani |

ನವದೆಹಲಿ: ಮುಂದಿನ 10 ವರ್ಷಗಳಲ್ಲಿ ಭಾರತ ದಾಖಲೆ ಸಂಖ್ಯೆಯ ಹೊಸ ವೈದ್ಯರನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಎ.15) ಹೇಳಿದ್ದಾರೆ.

Advertisement

ಗುಜರಾತಿನ ಭುಜ್‌ ನಲ್ಲಿ 200 ಹಾಸಿಗೆಗಳ ಕೆ.ಕೆ ಪಟೇಲ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದಾಗಿ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಿದ್ದು ಇದರಿಂದ ಮುಂಬರುವ 10 ವರ್ಷಗಳಲ್ಲಿ ಭಾರತವು ದಾಖಲೆ ಸಂಖ್ಯೆಯ ಹೊಸ ವೈದ್ಯರನ್ನು ಪಡೆಯಲಿದೆ ಎಂದು ಹೇಳಿದರು.

ಭುಜ್‌ ನಲ್ಲಿರುವ ಆಸ್ಪತ್ರೆಯು ಜನರಿಗೆ ಕೈಗೆಟುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗುವಂತೆ ಮಾಡುತ್ತದೆ.

ಎರಡು ದಶಕಗಳ ಹಿಂದೆ ಗುಜರಾತ್‌ ನಲ್ಲಿ ಕೇವಲ 1,100 ಸೀಟುಗಳೊಂದಿಗೆ ಕೇವಲ 9 ವೈದ್ಯಕೀಯ ಕಾಲೇಜುಗಳು ಇದ್ದವು. ಆದರೆ ಕಳೆದ 20 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಸಾಕಷ್ಟು ಸುಧಾರಣೆಯಾಗಿವೆ ಮಾತ್ರವಲ್ಲದೇ ಈಗ ರಾಜ್ಯದಲ್ಲಿ ಒಂದು ಏಮ್ಸ್‌ ಸೇರಿದಂತೆ 36ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದೇವೆ .ಪ್ರತಿ ವರ್ಷ 6,000 ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಂಜನಾದ್ರಿ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಖಂಡಿಸಿ ಮನವಿ ಸಲ್ಲಿಕೆ

Advertisement

ಉತ್ತಮ ಆರೋಗ್ಯ ಸೌಲಭ್ಯಗಳು ಕೇವಲ ರೋಗಗಳ ಚಿಕಿತ್ಸೆಗೆ ಸೀಮಿತವಾಗಿಲ್ಲ ಅವು ಸಾಮಾಜಿಕ ನ್ಯಾಯವನ್ನು
ಉತ್ತೇಜಿಸುತ್ತವೆ. ಬಡವರು ಅಗ್ಗದ ಮತ್ತು ಉತ್ತಮ ಚಿಕಿತ್ಸೆಗೆ ಪಡೆದಾಗ ವ್ಯವಸ್ಥೆಯಲ್ಲಿ ಅವರ ನಂಬಿಕೆ ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.

2001ರಲ್ಲಿ ಭೂಕಂಪದಿಂದ ಉಂಟಾದ ವಿನಾಶವನ್ನು ನೆನಪಿಕೊಂಡ ಮೋದಿ,ಭುಜ್‌ ಮತ್ತು ಕಚ್‌ ನ ಜನರು ಈಗ ತಮ್ಮ ಕಠಿಣ ಪರಿಶ್ರಮದಿಂದ ಈ ಪ್ರದೇಶದ ಹೊಸ ಭವಿಷ್ಯವನ್ನು ಬರೆಯುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next