ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದು, ಗುರುವಾರ (ಜುಲೈ 21) ಮತ ಎಣಿಕೆ ಆರಂಭಗೊಂಡಿದೆ.
ಇದನ್ನೂ ಓದಿ:ದುಷ್ಕೃತ್ಯ ಬಿಡದ ರೌಡಿಶೀಟರ್ ಮತ್ತೆ ಜೈಲಿಗೆ: 10 ಅಪರಾಧ ಪ್ರಕರಣ, 3 ಠಾಣೆಗಳಲ್ಲಿ ರೌಡಿಪಟ್ಟ
ಲೋಕಸಭೆಯ ರೂಂ ನಂಬರ್ 63ರಲ್ಲಿ ಮತ ಎಣಿಕೆ ಆರಂಭಗೊಂಡಿದೆ. ಮತ ಎಣಿಕೆ ಮುಕ್ತಾಯದ ಬೆನ್ನಲ್ಲೇ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ವರದಿ ತಿಳಿಸಿದೆ.
30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿರುವ ಬ್ಯಾಲೆಟ್ ಬಾಕ್ಸ್‌ಗಳು ಮಂಗಳವಾರ ಸಂಜೆಯ ಹೊತ್ತಿಗೆ ಸಂಸತ್ತನ್ನು ತಲುಪಿದ್ದು, ಅವುಗಳನ್ನು ಸಂಸತ್ತಿನಲ್ಲಿ ನಿಗದಿಗೊಳಿಸಲಾಗಿರುವ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿತ್ತು. ಈ ಪ್ರತಿಯೊಂದು ಬ್ಯಾಲೆಟ್ ಬಾಕ್ಸ್‌ಗಳಿಗೂ ಮಿಸ್ಟರ್ ಬ್ಯಾಲೆಟ್ ಬಾಕ್ಸ್ ಎಂಬ ಇ-ಟಿಕೆಟ್ ನೀಡಲಾಗಿರುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು.
ಗುರುವಾರ 11ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಸಂಜೆ ಹೊತ್ತಿಗೆ ದೇಶದ 15ನೇ ರಾಷ್ಟ್ರಪತಿ ಹೆಸರನ್ನು ಪ್ರಕಟಿಸಲಾಗುತ್ತದೆ. ನಿರೀಕ್ಷೆಯಂತೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆ ಖಚಿತವಾಗಿದೆ.