ಬೆರ್ನ್ : ಸ್ವಿಸ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿರುವ ಭಾರತೀಯರ ಬಗ್ಗೆ ದಾಖಲೆಗಳ ವಿಸ್ತೃತ ದಾಖಲೆಗಳ ಮೂರನೇ ಕಂತೆ ಭಾರತದ ಕೈಗೆ ಈ ತಿಂಗಳ ಕೊನಯಲ್ಲಿ ಲಭ್ಯವಾಗಲಿದೆ ಎಂಬುವುದಾಗಿ ಅಧಿಕಾರಿಗಳು ಇಳಿಸಿರುವುದಾಗಿ ವರದಿಯಾಗಿದೆ.
ದಾಖಲೆಗಳಲ್ಲಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಭಾರತೀಯರು ಹೊಂದಿರುವ ರಿಯಲ್ ಎಸ್ಟೇಟ್ ಸ್ವತ್ತುಗಳ ಬಗ್ಗೆ ಮಾಹಿತಿ ಇದೇ ಮೊದಲ ಬಾರಿಗೆ ದೊರಕಲಿದೆ ಎಂದು ಕೂಡ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಕೊಹ್ಲಿಯೇ ನಾಯಕನಾಗಿ ಮುಂದುವರಿಯುತ್ತಾರೆ:ಬಿಸಿಸಿಐ|UDAYAVANI NEWS BULLETIN|13/9/2021
ಭಾರತೀಯ ಖಾತೆದಾರರು ಹೊಂದಿರುವ ಫ್ಲ್ಯಾಟ್‌ಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಮನೆಗಳ ಸಂಪೂರ್ಣ ವಿಸ್ತೃತ ವಿವರಗಳು ಲಭ್ಯವಾಗಲಿದೆ. ಈ ದಾಖಲೆಗಳನ್ನು ಉಭಯ ದೇಶಗಳ ನಡುವಿನ ಸ್ವಯಂ ಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿ ಈ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಈ ಹಿಂದೆ ಕಳೆದ ಸಪ್ಟೆಂಬರ್ ನಲ್ಲಿ ಭಾರತೀಯ ಖಾತೆದಾರರ ವಿವರಗಳಿರುವ ಎರಡನೇ ಕಂತೆಯತನ್ನು ಭಾರತಕ್ಕೆ ಒದಗಿಸಿತ್ತು.
ಇದನ್ನೂ ಓದಿ : Israeli firm unveils armed robot to patrol volatile borders