Advertisement

ಭಾರತದಲ್ಲಿ ಜನಸಂಖ್ಯೆ ಹೆಚ್ಚಿದರೆ ಭದ್ರತಾ ಮಂಡಳಿ ಸ್ಥಾನ ಖಚಿತ?

11:00 AM Jul 13, 2022 | Team Udayavani |

ವಿಶ್ವಸಂಸ್ಥೆ: ಮುಂದಿನ ವರ್ಷಾಂತ್ಯಕ್ಕೆ ಜನಸಂಖ್ಯೆಯಲ್ಲಿ ಚೀನವನ್ನು ಭಾರತ ಮೀರಿಸಿದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಮಾನ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ.

Advertisement

ಹೀಗೆಂದು ವಿಶ್ವಸಂಸ್ಥೆಯ ಜನಸಂಖ್ಯೆ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವಿಭಾಗದ ಒಂದು ಭಾಗವಾಗಿರುವ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್‌ ವಿಲಿಯಂ ಮಾತನಾಡಿ “ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ ಕೆಲವೊಂದು ಲಾಭಗಳೂ ಇವೆ. ವಿಶ್ವಸಂಸ್ಥೆಯಲ್ಲಿ ಅಂಥ ರಾಷ್ಟ್ರಕ್ಕೆ ಪ್ರಭಾವಶಾಲಿ ಹೊಣೆ ಸಿಗಬಹುದು. ವಿಶೇಷವಾಗಿ ಭದ್ರತಾ ಮಂಡಳಿಯಲ್ಲಿನ ಶಾಶ್ವತ ಐದು ಸ್ಥಾನಗಳಲ್ಲಿಯೂ ಸ್ಥಾನ ಸಿಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಹಲವು ದಶಕಗಳಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಭಾರತದ ಹಂಬಲವಾಗಿದೆ. ಆದರೆ, ಅದು ಇನ್ನೂ ಪರಿಶೀಲನೆಯ ಹಂತದಲ್ಲಿ ಮತ್ತು ಏಷ್ಯಾ ವತಿಯಿಂದ ಚೀನಾ ಸ್ಥಾನ ಪಡೆದಿದೆ. ಹೀಗಾಗಿ, ಭಾರತದ ಹಂಬಲಕ್ಕೆ ಚೀನ ಅಡ್ಡವಾಗಿ ಇರುವುದರಿಂದಲೂ ಆ ಬೇಡಿಕೆ ಇನ್ನೂ ಈಡೇರಿಲ್ಲ.

ಚೀನ ಸರ್ಕಾರ ಜನಸಂಖ್ಯೆಯ ನಿಯಂತ್ರಣಕ್ಕಾಗಿ 1970 ಮತ್ತು 1980ರ ದಶಕದಲ್ಲಿ ಕೈಗೊಂದ್ದರಿಂದ ಆ ದೇಶದ ಜನರಲ್ಲಿ ಮಕ್ಕಳನ್ನು ಪಡೆಯುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಜನಸಂಖ್ಯೆಯ ವೃದ್ಧಿಯ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಜಾನ್‌ ವಿಲಿಯಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next