Advertisement

2026ರ ವೇಳೆಗೆ ಭಾರತದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ

03:50 AM Jul 12, 2017 | Karthik A |

ವಿಶ್ವಸಂಸ್ಥೆ: ಮುಂದಿನ ದಶಕದ ವೇಳೆಗೆ ಭಾರತ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಅಗ್ರ ಸ್ಥಾನಕ್ಕೇರಲಿದೆ. 2026ರ ಹೊತ್ತಿಗೆ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಲಿದೆ. ಜತೆಗೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವ‌ಸಂಸ್ಥೆ ಮತ್ತು ಒಇಸಿಡಿ ನೀಡಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ‘ಒಇಸಿಡಿ-ಎಫ್ಎಒ ಅಗ್ರಿಕಲ್ಚರ್‌ ಔಟ್‌ಲುಕ್‌ 2017-2026’ ವರದಿ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಜಾಗತಿಕ ಜನಸಂಖ್ಯೆ 730ರಿಂದ 820 ಕೋಟಿ ತಲುಪಲಿದ್ದು, ಇದೇ ಅವಧಿಯಲ್ಲಿ ಭಾರತದ ಜನಸಂಖ್ಯೆ ಸುಮಾರು 15 ಕೋಟಿ ಏರಿಕೆಯಾಗಿ, 130ರಿಂದ 150 ಕೋಟಿಗೆ ತಲುಪಲಿದೆ! ಈ ಮೂಲಕ ಚೀನಾವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next