Advertisement

ಭಾರತ-ದ. ಆಫ್ರಿಕಾ “ಎ’ಕ್ರಿಕೆಟ್‌ ಬೆಳಗಾವಿಯಿಂದ ಬೆಂಗಳೂರಿಗೆ

06:00 AM Jul 25, 2018 | |

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ವಾರ ನಡೆಯಲಿರುವ ಭಾರತ “ಎ’- ದಕ್ಷಿಣ ಆಫ್ರಿಕಾ “ಎ’ ತಂಡಗಳ ನಡುವಿನ ಮೊದಲ ಪಂದ್ಯವನ್ನು ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಮೂಲಕ 2 ಪಂದ್ಯಗಳ ಈ ಕಿರು ಸರಣಿಗೆ ಬೆಂಗಳೂರಿನ “ಚಿನ್ನಸ್ವಾಮಿ ಕ್ರೀಡಾಂಗಣ’ ಆತಿಥ್ಯ ವಹಿಸಲಿದೆ.

Advertisement

ಆ. 4ರಿಂದ 7ರ ವರೆಗೆ ಮೊದಲ ಪಂದ್ಯ ಬೆಳಗಾವಿಯಲ್ಲಿ ನಡೆಯ ಬೇಕಿತ್ತು. 2ನೇ ಪಂದ್ಯ ಆ. 10ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಆಯೋ ಜಿಸಲಾಗಿತ್ತು. ಆದರೆ ಬೆಳಗಾವಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಪಿಚ್‌ ಸಿದ್ಧಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯವನ್ನು ಸ್ಥಳಾಂತರಿ ಸಲು ಬಿಸಿಸಿಐ ಸೂಚಿಸಿದೆ. “ಎ’ ತಂಡಗಳ ನಡುವಿನ ಎರಡೂ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಕೆಎಸ್‌ಸಿಎ  ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next