Advertisement

ಒಡಿಶಾ ದೂರ ಕರಾವಳಿಯಿಂದ ಅಗ್ನಿ 2 ಕ್ಷಿಪಣಿ ಯಶಸ್ವೀ ಪರೀಕ್ಷೆ

12:24 PM Feb 20, 2018 | Team Udayavani |

ಭುವನೇಶ್ವರ : ಒಡಿಶಾ ದೂರ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಿಂದ ಭಾರತ ಇಂದು ದೇಶೀಯವಾಗಿ ನಿರ್ಮಿಸಲ್ಪಟ್ಟ ಮಧ್ಯಂತರ ವ್ಯಾಪ್ತಿಯ ಅಗ್ನಿ 2 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು.

Advertisement

ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ ಈ ಕ್ಷಿಪಣಿಯನ್ನು ಬಾಲಸೋರ್‌ ಜಿಲ್ಲೆಯ ಇಂಟೆಗ್ರೇಟೆಡ್‌ ಟೆಸ್ಟ್‌ ರೇಂಜ್‌ನ ಕಾಂಪ್ಲೆಕ್ಸ್‌ 4ರಿಂದ ಇಂದು ಮಂಗಳವಾರ ಬೆಳಗ್ಗೆ 8.38ರ ಹೊತ್ತಿಗೆ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಬಳಕೆ ತರಬೇತಿ ಅಭ್ಯಾಸದ ಅಂಗವಾಗಿ ಈ ಉಡಾವಣೆಯನ್ನು ಭಾರತೀಯ ಸೇನೆಯ ಸ್ಟಾಟೆಜಿಕ್‌ ಫೋರ್ಸಸ್‌ ಕಮಾಂಡ್‌ (ಎಸ್‌ಎಫ್ಸಿ) ನಡೆಸಿರುವುದಾಗಿ ವರದಿಯಾಗಿದೆ.

ಅಗ್ನಿ 2 ಕ್ಷಿಪಣಿಯನ್ನು ಈಗಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next