ಸಾವೋ ಪಾವ್ಲೋ: ಅರಬ್ ರಾಷ್ಟ್ರಗಳಿಗೆ ಆಹಾರ ಪೂರೈಕೆ ಮಾಡುವ ವಿಚಾರದಲ್ಲಿ ಭಾರತಕ್ಕೆ ಮತ್ತೆ ಮೊದಲ ಸ್ಥಾನ ಲಭಿಸಿದೆ. ಈ ಮೂಲಕ ಅದು ಬ್ರೆಜಿಲ್ ಅನ್ನು ಹಿಂದಿಕ್ಕಿದೆ.
ಹದಿನೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥ ಬೆಳವಣಿಗೆಯಾಗಿದೆ. ಭಾರತದ ಸಾಧನೆ ಬಗ್ಗೆ ಅರಬ್-ಬ್ರೆಜಿಲ್ ವಾಣಿಜ್ಯ ಒಕ್ಕೂಟ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕಿನಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಇಂಥ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.
ಬ್ರೆಜಿಲ್‌ನಿಂದ ಶೇ.8.15ರಷ್ಟು ಪ್ರಮಾಣದಲ್ಲಿ ಆಹಾರ ವಸ್ತುಗಳು ಪೂರೈಕೆಯಾಗಿದ್ದರೆ, ಭಾರತದಿಂದ ಶೇ.8.25ರಷ್ಟು ಪೂರೈಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದುವರೆಗೆ ಬ್ರೆಜಿಲ್‌ನಿಂದ ಅರಬ್ ರಾಷ್ಟ್ರಗಳಿಗೆ 30 ದಿನಗಳಲ್ಲಿ ಆಹಾರ ವಸ್ತುಗಳ ಪೂರೈಕೆಯಾಗುತ್ತಿದ್ದರೆ, ಸದ್ಯದ ಸ್ಥಿತಿಯಲ್ಲಿ 60 ದಿನಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ:ಒಮಿಕ್ರಾನ್ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ
ದೇಶಕ್ಕೆ ಪ್ರಬಲ ಸ್ಪರ್ಧೆಯನ್ನು ಬ್ರೆಜಿಲ್ ನೀಡಿದ್ದರೂ, ಒಟ್ಟಾರೆಯಾಗಿ ದೇಶವೇ ಈ ವಿಚಾರದಲ್ಲಿ ಅಗ್ರ ಸ್ಥಾನ ಗಳಿಸಿದೆ. ಬ್ರೆಜಿಲ್‌ನಿಂದ ಕೃಷಿ ಸಂಬಂಧಿತ ವಸ್ತುಗಳ ರಫ್ತು ಅರಬ್ ರಾಷ್ಟ್ರಗಳಿಗೆ ಶೇ.1.4ರಷ್ಟು ಏರಿಕೆಯಾಗಿದೆ. ಸರಕು ಸಾಗಣೆ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ನಿವಾರಣೆಯಾಗಿದ್ದರಿಂದ ಈ ಬೆಳವಣಿಗೆಯಾಗಿದೆ.