Advertisement

ಕೋವಿಡ್ ಕಾಟದಿಂದ ತತ್ತರಿಸಿರುವ ನೆರೆರಾಷ್ಟ್ರಗಳಿಗೆ ಭಾರತ ಔಷಧ ಉಡುಗೊರೆ

07:01 AM Apr 10, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ಕಾಟದಿಂದ ತತ್ತರಿಸಿರುವ ನೆರೆಹೊರೆಯ ರಾಷ್ಟ್ರಗಳಿಗೆ ಮಲೇರಿಯಾ ನಿರೋಧಕ ಔಷಧ ವನ್ನು ಉಡುಗೊರೆಯಾಗಿ ನೀಡಲು ಭಾರತ ಮುಂದಾಗಿದೆ. ಈಗಾಗಲೇ ಶ್ರೀಲಂಕಾಕ್ಕೆ 10 ಟನ್‌ ಔಷಧಗಳನ್ನು ಕಳುಹಿಸಲಾಗಿದೆ. ಭೂತಾನ್‌, ಬಾಂಗ್ಲಾದೇಶ, ಮ್ಯಾನ್ಮಾರ್‌, ಅಫ್ಘಾನಿ ಸ್ತಾನ ನೇಪಾಳ, ಸೆಷೆಲ್ಸ್‌, ಮಾರಿಷಸ್‌, ಆಫ್ರಿಕಾ ಖಂಡದ ದೇಶ ಗಳಿಗೆ ಔಷಧ ಗಿಫ್ಟ್ ತಲುಪಲಿದೆ. ಈ ಮೂಲಕ ಕೇಂದ್ರ ಸರಕಾರ ವೈದ್ಯಕೀಯ ರಾಜತಾಂತ್ರಿ ಕತೆ ಮೂಲಕ ಬಾಂಧವ್ಯ ವೃದ್ಧಿಗೆ ಮುಂದಾಗಿದೆ.

Advertisement

ಇನ್ನೊಂದೆಡೆ, ವಾಣಿಜ್ಯ ಒಪ್ಪಂದದ ಆಧರಿಸಿ ಅಮೆರಿಕ, ಬ್ರೆಜಿಲ್, ಸ್ಪೇನ್‌, ಬಹ್ರೈನ್‌, ಇಂಗ್ಲೆಂಡ್‌, ಜರ್ಮನಿ ಸೇರಿದಂತೆ ಕೆಲವು ದೇಶಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮತ್ತು ಪ್ಯಾರಾಸೆಟ ಮಾಲ್‌ ಮಾತ್ರೆಗಳನ್ನು ಕಳಿಸಿಕೊಡಲಾಗಿದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಗಲ್ಫ್ ರಾಷ್ಟ್ರಗಳಿಗೆ ಔಷಧ ಅಗತ್ಯತೆ ಕುರಿತು ಕೇಂದ್ರ ಸರಕಾರ ವಿಶೇಷ ನಿಗಾ ವಹಿಸಿದ್ದು, ವಿದೇಶಾಂಗ ವ್ಯವಹಾರ ಸಚಿವ ಎಸ್‌.ಜೈಶಂಕರ್‌ ಆ ದೇಶಗಳ ಸರಕಾರಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದಾರೆ.

ಪಾಕ್‌ನ ವಿರೋಧ: ಸೋಂಕಿನ ವಿರುದ್ಧ ದಕ್ಷಿಣ ಏಷ್ಯಾದ ರಾಷ್ಟ್ರಗಳೆಲ್ಲಾ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಬೇಕೆಂಬ ಭಾರತದ ಇಂಗಿತಕ್ಕೆ ಆರಂಭದಲ್ಲಿ ಸಮ್ಮತಿ ಸೂಚಿಸಿದಂತೆ ನಟಿಸಿದ್ದ ಪಾಕಿಸ್ತಾನ, ಇದೀಗ ತನ್ನ ಅಸಲಿ ಆಟ ಆರಂಭಿಸಿದೆ. ಅದಕ್ಕೆ ಪೂರಕವಾಗಿ ಬುಧವಾರ ನಡೆದಿದ್ದ ಸಭೆ ಬಹಿಷ್ಕರಿಸಿತ್ತು. ಸಾರ್ಕ್‌ ನಾಯಕತ್ವವನ್ನು ಮೋದಿ ವಹಿಸಿರುವುದನ್ನು ಸಹಿಸಿಕೊಳ್ಳದ ಪಾಕಿಸ್ಥಾನ ಮತ್ತೂಮ್ಮೆ ತನ್ನ ಸಂಕುಚಿತ ರಾಜಕೀಯ ಬುದ್ಧಿ ತೋರಿದೆ. ಪಾಕ್‌ ಸಾರ್ಕ್‌ ಕಾರ್ಯದರ್ಶಿಗಳೇ ಈ ಕಾರ್ಯದ ನೇತೃತ್ವ ವಹಿಸುವುದು ಉತ್ತಮ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next