Advertisement

ಸುಧಾರಿತ ಪಿನಾಕ ರಾಕೆಟ್‌ ಲಾಂಚರ್‌ ಯಶಸ್ವಿ ಪರೀಕ್ಷೆ

07:16 PM Dec 11, 2021 | Team Udayavani |

ನವದೆಹಲಿ: ಡಿಆರ್‌ಡಿಒದಿಂದ ಅಭಿವೃದ್ಧಿಪಡಿಸಲ್ಪಟ್ಟಿರುವ ವಿಸ್ತೃತ ದೂರದ ಪಿನಾಕ ಮಲ್ಟಿ ಬ್ಯಾರೆಲ್‌ ರಾಕೆಟ್‌ ಲಾಂಚರ್‌ ಸಿಸ್ಟಮ್‌ ಅನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

Advertisement

ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಹಲವು ಭಿನ್ನ ದೂರಗಳನ್ನು ಯಶಸ್ವಿಯಾಗಿ ತಲುಪಬಲ್ಲ ರಾಕೆಟ್‌ಗಳನ್ನು ಪರೀಕ್ಷಿಸಲಾಯಿತು. ಈ ವೇಳೆ ರಾಕೆಟ್‌ಗಳಿಗೆ ವಿವಿಧ ಸಾಮರ್ಥ್ಯದ ಸಿಡಿತಲೆಗಳನ್ನು ಅಳವಡಿಸಲಾಗಿತ್ತು. ವಿವಿಧ ದೂರದ ಗುರಿಗಳನ್ನೂ ನಿಗದಿಪಡಿಸಲಾಗಿತ್ತು. ನಿಖರವಾಗಿ ಎಷ್ಟು ಸಾಮರ್ಥ್ಯ, ಎಷ್ಟು ದೂರದ ರಾಕೆಟ್‌ಗಳಿವು ಎಂಬ ಮಾಹಿತಿ ಲಭ್ಯವಾಗಿಲ್ಲ.

ಪ್ರಸ್ತುತ ಪರೀಕ್ಷೆಗೊಳಪಟ್ಟಿರುವ ವ್ಯವಸ್ಥೆ, ಈ ಹಿಂದೆ ಪಿನಾಕ (ಶಿವನ ಧನುಸ್ಸಿನ ಹೆಸರು) ರಾಕೆಟ್ಸ್‌ ಎಂದು ಕರೆಸಿಕೊಳ್ಳುತ್ತಿದ್ದ ವ್ಯವಸ್ಥೆಯ ಸುಧಾರಿತ ರೂಪ. ಡಿಆರ್‌ಡಿಒ ಇದನ್ನು ವಿನ್ಯಾಸ ಮಾಡಿದೆ. ಪುಣೆಯ ಹೈ ಎನರ್ಜಿ ಮೆಟೀರಿಯಲ್ಸ್‌ ರೀಸರ್ಚ್‌ ಪ್ರಯೋಗಾಲಯದಲ್ಲಿ ರೂಪಿಸಲಾಗಿದೆ.

ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಸಂತೆಯಲ್ಲಿ ಧನ ಸಂಗ್ರಹ

ಮೂರು ದಿನಗಳಿಂದ ಪರೀಕ್ಷೆ:
ಸತತ ಮೂರು ದಿನಗಳ ಪೋಖ್ರಾನ್ ರೇಂಜ್‌ನಲ್ಲಿ ರಾಕೆಟ್‌ಗಳನ್ನು ಪರೀಕ್ಷೆ ಮಾಡಲಾಗಿದೆ. ಹಾಗೆಯೇ ದೇಶೀಯವಾಗಿ ನಿರ್ಮಿಸಲಾಗಿರುವ ಪ್ರಾಕ್ಸಿಮಿಟಿ ಫ್ಯೂಝ್ಗಳ (ಗುರಿ ಸನಿಹವಾದಾಗ ಸ್ಫೋಟಕಗಳನ್ನು ಸ್ಫೋಟಿಸುವ ಸಾಧನ) ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಲಾಗಿದೆ. ಈ ಸಾಧನಗಳನ್ನು ಭಾರತೀಯ ಸೇನೆ ಬಳಸುತ್ತದೆ. ಇದೇ ವರ್ಷ ಜೂನ್‌ನಲ್ಲಿ, ಇದೇ ತಿಂಗಳಲ್ಲಿ ಹಿಂದೊಮ್ಮೆ ಇವುಗಳನ್ನು ಪರೀಕ್ಷಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next