Advertisement

ವೈಮಾನಿಕ ದಾಳಿಗೆ ಅಭ್ಯಾಸ್‌ ಕ್ಷಿಪಣಿ ಯಶಸ್ವಿ ಉಡಾವಣೆ

01:34 AM Jun 30, 2022 | Team Udayavani |

ಬಾಲಾಸೊರ್‌ (ಒಡಿಶಾ): ವಾಯು ಮಾರ್ಗದ ಮೂಲಕ ಬರುವ ದಾಳಿಕೋರರನ್ನು ಹೊಡೆದುರುಳಿಸಬಲ್ಲ ಅಭ್ಯಾಸ್‌ ಅಸ್ತ್ರವನ್ನು ಒಡಿಶಾ ಕರಾವಳಿಯ ಚಾಂದೀಪುರದಲ್ಲಿರುವ ಇಂಟಿಗ್ರೇ­ಟೆಡ್‌ ಟೆಸ್ಟ್‌ ರೇಂಜ್‌ನಲ್ಲಿ (ಐಟಿಆರ್‌) ಯಶಸ್ವಿ­ಯಾಗಿ ಪ್ರಯೋಗಿಸಲಾಯಿತು.

Advertisement

ಅಭ್ಯಾಸ್‌ ಅಸ್ತ್ರವನ್ನು ಹೊತ್ತೂಯ್ದ ವಾಯುಪಡೆಯ ಯುದ್ಧ ವಿಮಾನ ಭೂಮಿಯಿಂದ ಆಗಸದಲ್ಲಿ ನಿಗದಿತ ಹಂತದವರೆಗೆ ಸಾಗಿ, ಪೂರ್ವ ನಿಗದಿತ ತಾಂತ್ರಿಕ ಅನುಸಂಧಾನದಡಿ ಯಶಸ್ವಿಯಾಗಿ ಪ್ರಯೋಗ­ವಾಗಿ­ದ್ದಲ್ಲದೆ, ನಿರೀಕ್ಷಿತ ಫ‌ಲಿತಾಂಶವನ್ನು ನೀಡಿದೆ ಎಂದು ಕೇಂದ್ರದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಅಭ್ಯಾಸ್‌ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಡಿಆರ್‌ಡಿಒ ಅಂಗಸಂಸ್ಥೆ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next