Advertisement
ಗುವಾಹಾಟಿಯಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿ ತನ್ನ ಬಾಳ್ವೆಯ 73ನೇ ಶತಕ ಪೂರೈಸಿದ ವಿರಾಟ್ ಕೊಹ್ಲಿ ಅವರು ಭಾರತ ಅಧಿಕಾರಯುತವಾಗಿ ಗೆಲ್ಲಲು ನೆರವಾದರು. ಏಷ್ಯಾ ಕಪ್‌ನಲ್ಲಿ ಅಘಾ^ನಿಸ್ಥಾನ ವಿರುದ್ಧ ಶತಕ ಸಿಡಿಸುವ ಮೂಲಕ ತನ್ನ ಶತಕದ ಬರವನ್ನು ನೀಗಿಸಿಕೊಂಡಿದ್ದ ಕೊಹ್ಲಿ ಆಬಳಿಕ ಅಮೋಘ ಆಟದ ಪ್ರದರ್ಶನ ನೀಡುತ್ತ ಬಂದಿದ್ದಾರೆ.
Related Articles
Advertisement
ಈ ಮೂವರಲ್ಲದೇ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಲು ನೆರವಾಗಲಿದ್ದಾರೆ. ಬೌಲಿಂಗ್‌ನನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ತಂಡ ಅವಲಂಭಿಸಿದೆ. ಸಿರಾಜ್ ಗುವಾಹಾಟಿಯಲ್ಲಿ ಅಮೋಘ ದಾಳಿ ಸಂಘಟಿಸಿ ಲಂಕಾದ ಕುಸಿತಕ್ಕೆ ಕಾರಣರಾಗಿದ್ದರು. ಅವರು ಈಡನ್‌ನ ವೇಗದ ಟ್ರ್ಯಾಕ್‌ನಲ್ಲೂ ಮಿಂಚುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿ, ಚಹಲ್, ಕುಲದೀಪ್ ಅವರಿಗೆ ನೆರವಾಗಲಿದ್ದಾರೆ.
ದಸುನ್ ಶಣಕ ಆಸರೆನಾಯಕ ದಸುನ್ ಶಣಕ ಗುವಾಹಾಟಿಯಲ್ಲಿ ಏಕಾಂಗಿಯಾಗಿ ಹೋರಾಡಿ ತಂಡ ಪ್ರತಿಹೋರಾಟ ನೀಡಲು ನೆರವಾಗಿದ್ದರು. ಒಂದು ಹಂತದಲ್ಲಿ 179 ರನ್ನಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ತನ್ನ ಅಜೇಯ ಶತಕದ ನೆರವಿನಿಂದ ಮೇಲಕ್ಕೆ ಎತ್ತಿದ್ದರು. ಆಲ್‌ರೌಂಡರ್ ಆಗಿರುವ ಶಣಕ ಅವರಲ್ಲಿ ತಂಡ ಇನ್ನೂ ಭರವಸೆ ಇಟ್ಟುಕೊಂಡಿದೆ. ಅವರಿಗೆ ತಂಡದ ಇತರ ಆಟಗಾರರು ಸಂಘಟಿತ ನೆರವು ನೀಡಿದರೆ ಶ್ರೀಲಂಕಾ ತಿರುಗೇಟು ನೀಡುವ ಸಾಧ್ಯತೆಯಿದೆ. ಉತ್ತಮ ಫಾರ್ಮ್ನಲ್ಲಿರುವ ಆರಂಭಿಕ ಪಥುಮ್ ನಿಸ್ಸಂಕ ಈಡನ್‌ನಲ್ಲಿ ಮಿಂಚಿದರೆ ಶ್ರೀಲಂಕಾ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ. ಉಭಯ ತಂಡಗಳು
ಭಾರತ:
ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್. ಶ್ರೀಲಂಕಾ:
ದಸುನ್ ಶಣಕ (ನಾಯಕ), ಕುಸಲ್ ಮೆಂಡಿಸ್, ಪಥುಮ್ ನಿಸ್ಸಂಕ, ಅವಿಷ್ಕಾ ಫೆರ್ನಾಂಡೊ, ಸದೀರ ಸಮರವಿಕ್ರಮ, ಚರಿತ ಅಸಲಂಕ, ಧನಂಜಯ ಡಿ’ಸಿಲ್ವ, ವನಿಂದು ಹಸರಂಗ, ಅಶೆನ್ ಬಂಡಾರ, ಮಹೀಶ ತೀಕ್ಷಣ, ಕಸುನ್ ರಜಿತ, ನುವಾನಿದು ಫೆರ್ನಾಂಡೊ, ದುನಿತ್ ವೆಲ್ಲಲಗೆ, ಪ್ರಮೋದ್ ಮದುಶನ್, ಲಹಿರು ಕುಮಾರ. ಪಂದ್ಯ ಆರಂಭ ಅಪರಾಹ್ನ 1.30