ಜಿನಿವಾ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ನಿàರದಲ್ಲಿಯೂ ಅದೇ ಮಾದರಿಯ ಪರಿಸ್ಥಿತಿ ಇದೆ. ಹೀಗೆಂದು ವರದಿ ಕೊಟ್ಟದ್ದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ. ಕಾಶ್ಮೀರ ವಿಚಾರಕ್ಕೆ ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಪಾಕಿಸ್ತಾನ ಒತ್ತಾಯಿಸುತ್ತಿದ್ದರೂ, ಅದನ್ನು ನಿರಾಕರಿಸುತ್ತಿದ್ದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ವರದಿ ನೀಡಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರಬಲವಾಗಿ ಪ್ರತಿಭಟಿಸಿದೆ.
ಇದೊಂದು ನಿರಾಶಾದಾಯಕ,ದುರುದ್ದೇಶಪೂರಿತ, ಭಾರತ ವಿರೋಧಿ ಶಕ್ತಿಗಳ ಪ್ರೇರ ಣೆ ಯಿಂದ ರಚನೆಯಾದ ಸಂಗತಿಗಳ ಗುತ್ಛ ಎಂದು ಟೀಕಿಸಿದೆಯಲ್ಲದೆ, ಪೂರ್ವಾಗ್ರಹ ಪೀಡಿತವಾಗಿರುವ ವ್ಯಕ್ತಿ ಗ ಳಿಂದ ತಯಾರಾಗಿರುವ ಈ ವರದಿ ವಿಶ್ವಸಂಸ್ಥೆಯ ಘನತೆಗೆ ಕುಂದುತರುವಂಥದ್ದಾಗಿದೆ. ದೇಶದ ಸಾರ್ವಭೌಮತೆ ಪ್ರಶ್ನಿಸುವ ವರದಿಯನ್ನು ಭಾರತ ತಿರಸ್ಕರಿಸುತ್ತದೆ ಎಂದು ಹೇಳಿದೆ.
ವರದಿಯಲ್ಲೇನಿದೆ?
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಝೈದ್ ರಾದ್ ಅಲ್ ಹುಸೇನ್ ನೇತೃತ್ವದಲ್ಲಿ ತಯಾರಿಸಿರುವ ಈ ವರದಿಯಲ್ಲಿ, ಭಾರತ ಮತ್ತು ಪಾಕಿ ಸ್ತಾನ ಗಡಿ ರೇಖೆಯ ಎರಡೂ ಬದಿ ಗ ಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಅಸಂಖ್ಯ ಪ್ರಕರಣಗಳು ಜರುಗಿವೆ. ತುರ್ತಾಗಿ ಈ ಸಮಸ್ಯೆ ಬಗೆ ಹರಿಸಬೇಕಿದೆ. ಕಾಶ್ಮೀರದಲ್ಲಿ ಶಾಂತಿ ಬಯಸುವವರು ಮೊದಲು ಅಲ್ಲಿನ ಹಿಂಸಾ ಚಾರ ಸರ ಣಿ ಗ ಳಿಗೆ ಇತಿಶ್ರೀ ಹಾಡ ಲು ಪಣ ತೊ ಡ ಬೇ ಕು. ಜತೆಗೆ ಕಾಶ್ಮೀರ ಜನತೆ ಪ್ರತಿಪಾದಿಸುತ್ತಿರುವ ಸ್ವಯಮಾಡಳಿತ ಗೌರವಿಸಬೇಕು. ಈ ಹಿಂದಿನ ಹಾಗೂ ಈಗಿ ನ ಮಾನವ ಹಕ್ಕು ಗಳ ಉಲ್ಲಂಘ ನೆಗಳ ಹೊಣೆ ಹೊರಬೇಕು ಎಂದು ಪರೋಕ್ಷವಾಗಿ ಭಾರತವನ್ನು ಚುಚ್ಚಿದೆ. ಇನ್ನು, ಕಣಿವೆ ರಾಜ್ಯದಲ್ಲಿ ಪ್ರಾಣ ಒತ್ತೆ ಯಿಟ್ಟು ಶಾಂತಿ ಸುವ್ಯವಸ್ಥೆಗಾಗಿ ಶ್ರಮಿಸುತ್ತಿರುವ ಭಾರ ತೀಯ ಸೇನೆಯ ತ್ಯಾಗವನ್ನು ವರದಿಯಲ್ಲಿ ಬೆಲೆಯಿಲ್ಲದಂತೆ ಆಕ್ಷೇಪಿಸಲಾಗಿದೆ. 2016ರಿಂದ ಜಮ್ಮು ಕಾಶ್ಮೀರದಲ್ಲಿ ಆಗಿರುವ ನಾಗರಿಕರ ಹತ್ಯೆ ಪ್ರಕರಣಗಳ ತನಿಖೆಯಾಗಬೇಕು ಎಂದು ಒತ್ತಿ ಹೇಳ ಲಾ ಗಿದ್ದು, ಪ್ರತಿಭಟನಾ ನಿರತರನ್ನು ಚದುರಿಸಲು ಭದ್ರತಾ ಪಡೆ ಗಳು ಬಳ ಸು ತ್ತಿ ರುವ ಪೆಲೆಟ್ ಗನ್‌ಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದಿದೆ.
ಜಮ್ಮು ಕಾಶ್ಮೀರದ ಮಾನವ ಹಕ್ಕುಗಳ ಉಲ್ಲಂಘ ನೆ ಗಳ ಬಗ್ಗೆ ಅಂತಾ ರಾ ಷ್ಟ್ರೀಯ ತನಿಖೆ ನಡೆಸಲಾಗುವುದು. ತನಿಖೆ ಗಾಗಿ “ಕಮೀಷನ್ ಆಫ್ ಎನ್‌ಕ್ವೆರಿ (ಸಿಒಐ’ರಚಿಸುವ ಕುರಿತಂತೆ ಮುಂದಿನ ವಾರ, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ ಸಭೆ ನಡೆಸಿ ಚರ್ಚಿ ಸ ಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕಣಿವೆ ರಾಜ್ಯ ದಲ್ಲಿ ಅನೇಕ ಸಂಘಟನೆ ಗಳು ಬಂದೂಕು ಹಿಡಿ ದಿವೆ. ಹಿಜ್ಬುಲ್ ಮುಜಾ ಹಿ ದ್ದೀನ್ ಉಗ್ರ ಬುರ್ಹಾನ್ ವಾನಿ ಯನ್ನು ಭಾರ ತೀಯ ಭದ್ರತಾ ಪಡೆ ಗಳು ಹತ್ಯೆ ಮಾಡಿದ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ವರದಿಗೆ ಜಿಗ್ನೇಶ್ ಬೆಂಬಲ
ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ,ಈ ವರ ದಿಯನ್ನು ಬೆಂಬಲಿಸಿದ್ದಾರೆ. ಈ ವರದಿಯನ್ನು ಉಲ್ಲೇಖೀಸಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೋ ತುಣುಕನ್ನು ಷೇರ್ ಮಾಡುವಂತೆ ಮನವಿ ಮಾಡಿ ದ್ದಾರೆ.
ವರದಿಯ ಪ್ರಮುಖಾಂಶ
ಗಡಿ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘ ನೆ
ಕಣಿವೆ ರಾಜ್ಯದ ಉಗ್ರರಿಗೆ ತನ್ನ ಬೆಂಬಲವಿಲ್ಲ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದ್ದರೂ,ಭಾರತ ಅದನ್ನು ಒಪ್ಪು ತ್ತಿಲ್ಲ.
ಕಾಶ್ಮೀರದಲ್ಲಿ ಶಾಂತಿ ಬಯಸುವವರು (ಭಾರತ)ಈವರೆಗೆ ಆಗಿ ರುವ ಮಾನವ ಹಕ್ಕು ಉಲ್ಲಂಘನೆಗಳ ಹೊಣೆ ಹೊರ ಬೇಕು.
ಜಮ್ಮು ಕಾಶ್ಮೀರದಲ್ಲಿ ಜಾರಿಯಿರುವ ಸಶಸ್ತ್ರ ಪಡೆಗಳ ವಿಶೇಷಾಧಿ ಕಾರ ಕಾಯ್ದೆ ರದ್ದುಗೊಳಿಸಬೇಕು.
ಸೇನಾ ಸಿಬ್ಬಂದಿಯ ವಿಚಾರಣೆಗೆ ಕೇಂದ್ರದ ಅನುಮತಿ ಕಡ್ಡಾ ಯವೆಂಬನಿಯ ಮವೂ ರದ್ದಾ ಗ ಬೇಕು.
ವರದಿ ತಿರಸ್ಕರಿಸಿದ ಪಾಕ್
ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಮಾನವ ಹಕ್ಕುಗಳ ಉಲ್ಲಂಘ ನೆಯಾಗಿದ್ದಾಗಿ ಪ್ರಸ್ತಾಪಿಸಿರುವುದನ್ನು ಪಾಕಿಸ್ತಾನ ಅಲ್ಲಗಳೆದಿದೆ.ಪಿಒಕೆಯನ್ನು ಕಾಶ್ಮೀ ರಕ್ಕೆ ಹೋಲಿಸುವುದು ಸರಿಯಲ್ಲ.ಇದರಿಂದ,ಪಿಒಕೆಯ ಜನಜೀವನದ ಬಗ್ಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
ವಿಶ್ವಸಂಸ್ಥೆಯ ಈ ವರದಿ ಪಾಶ್ಚಿಮಾತ್ಯ ರಾಷ್ಟ್ರಗಳ ಪೂರ್ವಾ ಗ್ರಹ ಪೀಡಿತ ಚಿಂತನೆಗಳಿಂದ ಸಿದ್ಧಗೊಂಡಿದೆ.ಭಾರತದ ಸಾರ್ವಭೌಮತ್ವ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ನೋವುಂಟು ಮಾಡು ವಂಥದ್ದಾಗಿದೆ.
ರಣದೀಪ್ ಸುಜೇìವಾಲಾ, ಕಾಂಗ್ರೆಸ್ ವಕ್ತಾರ