Advertisement
ಆದರೆ ಇಲ್ಲೊಂದು ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಅವರು ಈ ತೀರ್ಪು ನೀಡಿದ ಪಂಚ ಸದಸ್ಯ ಪೀಠದ ಐವರಲ್ಲಿ ಒಬ್ಬರಾಗಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪ್ರಶಂಸಿಸಿ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಇದೀಗ ಚರ್ಚೆಯ ವಸ್ತುವಾಗಿದೆ. ಇನ್ನೂ ವಿಶೇಷವೆಂದರೆ ಈ ವಿವಾದಾತ್ಮಕ ಪತ್ರ ಬಾಂಗ್ಲಾ ದೇಶದ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಅಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟು ‘ಹಿಂದೂ ರಾಷ್ಟ್ರ’ ನಿರ್ಮಾಣಕ್ಕೆ ಹಾದಿ ಸುಗಮ ಮಾಡಿಕೊಟ್ಟಿರುವ ಈ ಐತಿಹಾಸಿಕ ತೀರ್ಪಿಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಸೇರಿದಂತೆ ಪಂಚ ಸದಸ್ಯರ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾಯಮೂರ್ತಿ ಡಿ. ವೈ. ಚಂದ್ರಚೂಢ್, ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರನ್ನು ಪ್ರಶಂಸಿಸಿ ಸ್ವತಃ ಪ್ರಧಾನಿ ಮೋದಿ ಅವರು ಈ ಪತ್ರ ಬರೆದಿರುವಂತೆ ಇದನ್ನು ರಚಿಸಲಾಗಿದೆ. ಮಾತ್ರವಲ್ಲದೇ ಈ ಪತ್ರದ ಕೆಳಗೆ ಪ್ರಧಾನ ಮಂತ್ರಿ ಅವರ ಸಹಿಯೂ ಇದೆ.