Advertisement

ಚೀನಾ ಯುದ್ಧೋತ್ಸಾಹ, ಭಾರತದ ನಡೆಗೆ ದೊಡ್ಡಣ್ಣನ ಬಹುಪರಾಕ್!

04:50 PM Aug 12, 2017 | Sharanya Alva |

ವಾಷಿಂಗ್ಟನ್:ಸಿಕ್ಕಿಂನ ಡೋಕ್ ಲಾಂ ಬಿಕ್ಕಟ್ಟಿನ ವಿಚಾರದಲ್ಲಿ ಭಾರತ ಪ್ರೌಢಶಕ್ತಿಯಂತೆ ವರ್ತಿಸುತ್ತಿದೆ. ಆದರೆ ಚೀನಾ ಮಾತ್ರ ಬೆದರಿಕೆಯ ತಂತ್ರಗಾರಿಕೆ ಉಪಯೋಗಿಸುವ ಮೂಲಕ ಹದಿಹರೆಯದ ಅಪಕ್ವ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ ಎಂದು ಅಮೆರಿಕದ ಉನ್ನತ ರಕ್ಷಣಾ ತಜ್ಞರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಸಿಕ್ಕಿಂನಲ್ಲಿರುವ ಡೋಕ್ ಲಾಂ ಗಡಿ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಕಳೆದ 50 ದಿನಗಳಿಂದ ಉಭಯ ದೇಶಗಳ ಸೈನಿಕರು ಮುಖಾಮುಖಿಯಾಗಿ ನಿಂತಿದ್ದಾರೆ.

ಚೀನಾದ ಯುದ್ಧೋನ್ಮಾದ ಹೇಳಿಕೆಯ ನಡುವೆ ಭಾರತ ಈ ವಿಚಾರದಲ್ಲಿ ನಡೆದುಕೊಂಡ ರೀತಿಯ ಬಗ್ಗೆ ನೇವಲ್ ವಾರ್ ಕಾಲೇಜ್ ನ ಯುದ್ಧತಂತ್ರದ ಪ್ರೊ.ಜೇಮ್ಸ್ ಆರ್ ಹೋಮ್ಸ್ ಶ್ಲಾಘಿಸಿದ್ದಾರೆ. ಭಾರತ ಇದುವರೆಗೆ ಸೂಕ್ತವಾದ ನಡವಳಿಕೆಯನ್ನೇ ಪ್ರದರ್ಶಿಸಿದೆ. ಬಿಕ್ಕಟ್ಟಿನಿಂದ ಹಿಂದೆ ಸರಿಯಲೂ ಇಲ್ಲ, ದೂರ ಹೋಗಲೂ ಇಲ್ಲ, ಚೀನಾದಂತೆ ಪದೇ, ಪದೇ ಪ್ರಚೋದನಾಕಾರಿ ಹೇಳಿಕೆಗಳಿಗೆ ಉತ್ತರಗಳನ್ನೂ ನೀಡಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next