Advertisement

ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿ… ಇದರಿಂದ ತೊಂದರೆ ಇಲ್ಲ: ಫಾರೂಖ್ ಅಬ್ದುಲ್ಲಾ

04:35 PM Sep 25, 2021 | Team Udayavani |

ನವದೆಹಲಿ: ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಶನಿವಾರ (ಸೆಪ್ಟೆಂಬರ್ 25) ತಾಲಿಬಾನ್ ಪರ ಬ್ಯಾಟ್ ಬೀಸಿರುವುದಾಗಿ ವರದಿ ಹೇಳಿದೆ.

Advertisement

ಇದನ್ನೂ ಓದಿ:ಪಂಜಾಬ್ Vs ಹೈದರಾಬಾದ್- ಸೋತವರ ಹಣಾಹಣಿ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಯುದ್ಧಗ್ರಸ್ತ ದೇಶದ ಆಡಳಿತ ನಡೆಸುತ್ತಿರುವ ತಾಲಿಬಾನ್ ಜತೆಗಿನ ಮಾತುಕತೆಗೆ ಸಂಬಂಧಿಸಿದಂತೆ ಯಾವುದೇ ಧಕ್ಕೆ ತಂದುಕೊಳ್ಳಬಾರದು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.

ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನ್ ಅಧಿಕಾರದಲ್ಲಿದೆ. ಅಫ್ಘಾನಿಸ್ತಾನದ ಈ ಹಿಂದಿನ ಅಬ್ದುಲ್ ಘನಿ ಸರ್ಕಾರದ ಅವಧಿಯ ಸಂದರ್ಭದಲ್ಲಿ ಭಾರತ ಸರ್ಕಾರ ವಿವಿಧ ಯೋಜನೆಗಳಿಗೆ ಬಿಲಿಯನ್ ಗಷ್ಟಲೇ ಹಣ ಹೂಡಿಕೆ ಮಾಡಿದೆ. ಈ ನಿಟ್ಟಿನಲ್ಲಿ ನಾವು ತಾಲಿಬಾನ್ ಜತೆಗಿನ ಸಂಬಂಧವನ್ನು ಯಾಕೆ ಕೆಡಿಸಿಕೊಳ್ಳಬೇಕು ಎಂದು ಫಾರೂಖ್ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next