ಬಂದಿರುವ ಸಮುದಾಯದಲ್ಲಿ ಕೌಶಲ್ಯ ತರಬೇತಿಯೂ ಅಗತ್ಯ ಎಂಬ ಅಭಿಪ್ರಾಯ ಮೂಡಿದೆ. ಕೇವಲ ಕೆಲಸದ ಕೌಶಲ್ಯ ಮಾತ್ರವಲ್ಲ, ಸಾಫ್ಟ್ ಸ್ಕಿಲ್ (ಮೃದು ಕೌಶಲ್ಯ) ಅಂದರೆ ನಡವಳಿಕೆ, ಭಾಷೆ, ವರ್ತನೆಗೆ ಸಂಬಂಧಿಸಿದ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ.’ ಇದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅವರ ಮಾತು. 2017ರ ಸೆ. 3ರಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಅನಂತಕುಮಾರ್ ಹೆಗಡೆ ತಾವು ಅಧಿಕಾರ ಸ್ವೀಕರಿಸಿದ ಬಳಿಕ ಆಗಿರುವ ಸಾಧನೆಗಳ ಕುರಿತು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Advertisement
ಒಂದು ವರ್ಷದಲ್ಲಿ ಪ್ರೊಗ್ರೆಸ್ ಕಾರ್ಡ್ ಜನರ ಮುಂದಿಡುತ್ತೇನೆಂದು ಹೇಳಿದ್ದೀರಿ. ಇದುವರೆಗೆ ಆ ನಿಟ್ಟಿನಲ್ಲಿ ಏನೇನು ಕೆಲಸ ಆಗಿದೆ?ಸರ್ಕಾರ ಕೌಶಲ್ಯಾಭಿವೃದಿಟಛಿ ಕಾರ್ಯಕ್ರಮ ಮಾಡುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ಸಮುದಾಯದ ಪಾಲುದಾರಿಕೆಯೊಂದಿಗೆ ಅಂದರೆ ಕೈಗಾರಿಕೆ,
ಉದ್ಯಮಗಳ ಪಾಲುದಾರಿಕೆಯೊಂದಿಗೆ ಕೌಶಲ್ಯಾಭಿವೃದಿಟಛಿ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಕೌಶಲ್ಯ ಎಂದರೆ
ಕೇವಲ ಉದ್ಯೋಗ ಆಧರಿತ ಅಲ್ಲ. ಒಬ್ಬ ಒಳ್ಳೆಯ ಉದ್ಯಮಿ ಅಥವಾ ಉದ್ಯೋಗಿಯಾಗಬೇಕಾದರೆ ಆತನ ನಡವಳಿಕೆ, ಭಾಷೆ. ವರ್ತನೆಯೂ ಅಗತ್ಯ.
ಇವುಗಳಿಗೂ ಒತ್ತು ನೀಡಿದ್ದು, ಅನೇಕ ಸಂಸ್ಥೆಗಳು, ವಿವಿಗಳು, ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ಮುಂದುವರಿಯುತ್ತಿದ್ದು, ಒಳ್ಳೆಯ ಫಲಿತಾಂಶ ಸಿಗುತ್ತಿದೆ. ಕರ್ನಾಟಕದಲ್ಲಿ ಶ್ರೀ ಶ್ರೀ ರವಿಶಂಕರ್ ಆಶ್ರಮ, ಧರ್ಮಸ್ಥಳದ ಗ್ರಾಮೀಣಾಭಿವೃದಿಟಛಿ ಸಂಸ್ಥೆ ಸೇರಿ ಅದರ ಎಲ್ಲ ಅಂಗ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಒಟ್ಟಾರೆ ನಮ್ಮ ಗುರಿ, ಮುಂದಿನ ತಲೆಮಾರು ಉದ್ಯಮ ಮತ್ತು ಉದ್ಯೋಗ ಎರಡೂ ದೃಷ್ಟಿಯಿಂದ ಹೊಸ ದಾಪುಗಾಲು ಇಡುವಂತಾಗ ಬೇಕು ಮತ್ತು ಭಾರತ ವಿಶ್ವದ ಕೌಶಲ್ಯ ರಾಜಧಾನಿ ಅಗಬೇಕು ಎಂಬುದು.
ನಮ್ಮ ಜನ ಸಮುದಾಯದಲ್ಲಿ ಕೌಶಲ್ಯ ತರಬೇತಿ ಎಂದರೆ ಗೌರವ ಇರಲಿಲ್ಲ. ಕೇವಲ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನೇ ಜನ ಒಪ್ಪಿಕೊಂಂಡು
ಬಂದಿದ್ದರಿಂದ ಕೌಶಲ್ಯ ತರಬೇತಿ ಅಗತ್ಯ ಎಂದು ಯಾರಿಗೂ ಅನಿಸುತ್ತಿರಲಿಲ್ಲ. ಹೀಗಾಗಿ ಕೌಶಲ್ಯಾಭಿವೃದಿಟಛಿಗೆ ಬೇಕಾದ ವಾತಾವರಣ ಸೃಷ್ಟಿ ಮಾಡುವ ಸವಾಲು ನಮ್ಮ ಮುಂದಿತ್ತು. ಅದರಲ್ಲಿ ಯಶಸ್ವಿಯಾಗುತ್ತಿದ್ದೇವೆ. ಪಾರಂಪರಿಕ ಕೌಶಲ್ಯಕ್ಕೆ ಆದ್ಯತೆ ನೀಡಿ ಪ್ರಮಾಣಪತ್ರ ಕೊಡುತ್ತೇವೆ. ಅವರ ಕೌಶಲ್ಯಕ್ಕೆ ಗೌರವ ನೀಡುವ ಕೆಲಸ ಮಾಡುತ್ತೇವೆ ಎಂದು ಈ ಹಿಂದೆ ಹೇಳಿದ್ದೀರಿ. ಆ ಕೆಲಸ ಏನಾಯಿತು?
ಭಾರತದಂತಹ ರಾಷ್ಟ್ರದಲ್ಲಿ ಕಮ್ಮಾರಿಕೆ, ಚಮ್ಮಾರಿಕೆ, ಕೃಷಿ, ಕುಂಬಾರಿಕೆ ಮುಂತಾದವು ಜನ್ಮದಾತ ಕೌಶಲ್ಯಗಳು. ಆದರೆ, ಆಧುನಿಕತೆಯ ಶಿಕ್ಷಣದ ಹಿಂದೆ ಓಡುವ ಭರದಲ್ಲಿ ಈ ಕೌಶಲ್ಯ ಹಿಂದೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅಂಥ ಕೌಶಲ್ಯ ಮುಂದುವರಿಸಿಕೊಂಡು ಬರುವವರನ್ನು ಗುರುತಿಸಿ ಅವರಿಗೆ ರೆಕಗ್ನಿಷನ್ ಆಫ್ ಪ್ರಿಯರ್ ಲರ್ನಿಂಗ್ (ಆರ್‌ಪಿಎಲ್) ಪ್ರಮಾಣಪತ್ರ ನೀಡುವ ಕೆಲಸ ನಡೆಯುತ್ತಿದೆ.
Related Articles
ಖಂಡಿತವಾಗಿ. ಸ್ಥಳೀಯ ಕೌಶಲ್ಯಗಳ ನೆರವಿನೊಂದಿಗೆ ಅತಿ ಸಣ್ಣ ಉದ್ಯಮಿಗಳು ಹೆಚ್ಚಾಗಬೇಕೆಂಬ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಮುದ್ರಾ ಯೋಜನೆಯ ನೆರವು ಪಡೆಯಲಾಗುತ್ತಿದೆ. ಇದರ ಜತೆಗೆ ಕಾರ್ಪೋರೇಟ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯಡಿ ಸಣ್ಣ ಉದ್ದಿಮೆದಾರರಿಗೆ ಕೌಶಲ್ಯ ತರಬೇತಿ ಕೊಡಲು ಮುಂದೆ ಬಂದಿದ್ದಾರೆ.
Advertisement
ನಿಮ್ಮ ಇಲಾಖೆಯಲ್ಲಿ ಸಾಧನೆ ತೃಪ್ತಿ ತಂದಿದೆಯಾ? ಖುಷಿಯಂತೂ ಇದೆ. ಕೈಗಾರಿಕೆಗಳ ಜತೆ ಕೈಜೋಡಿಸಿ ನ್ಯಾಷನಲ್ ಅಪೆøಂಟಿಷಿಪ್ ಪ್ರೋಗ್ರಾಮ್ ಸರ್ವೀಸ್ (ನ್ಯಾಪ್ಸ್) ಎಂಬ ಯೋಜನೆ ಇತ್ತು.
2016ರ ಏಪ್ರಿಲ್‌ನಲ್ಲಿ ಒಂದು ಲಕ್ಷ ಮಂದಿ ನ್ಯಾಪ್ಸ್ ತರಬೇತಿ ಪಡೆಯುತ್ತಿದ್ದರೆ ಈಗ ಅದರ ಸಂಖ್ಯೆ 10 ಲಕ್ಷ ದಾಟಿದೆ. ಅಂತಾರಾಷ್ಟ್ರೀಯ ಕೌಶಲ್ಯ
ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಇಲಾಖೆಯಲ್ಲಿ ಇಷ್ಟೆಲ್ಲ ಸಾಧನೆಯಾಗಿದೆ ಎನ್ನುತ್ತೀರಿ. ಆದರೆ, ಏಕೆ ಇದು ಮುಂಚೂಣಿಗೆ ಬರುತ್ತಿಲ್ಲ?
ಇದನ್ನು ನನ್ನ ದೌರ್ಬಲ್ಯ ಎಂದು ಭಾವಿಸಬಹುದು. ಮಾಧ್ಯಮಗಳು ನನ್ನನ್ನು ನೋಡುವ ದೃಷ್ಟಿಕೋನ ಹಾಗಿದೆ. ಅನಂತಕುಮಾರ್ ಹೆಗಡೆ ಅಂದರೆ
ರಾಜಕೀಯವಾಗಿ ಸೆನ್ಸೇಷನಲ್ ಸುದ್ದಿ ಕೊಡುತ್ತಾರೆಂದು ಭಾವಿಸುತ್ತಾರೆಯೇ ಹೊರತು ಒಟ್ಟಾರೆ ಕೆಲಸಗಳನ್ನು ಗಮನಿಸುವುದಿಲ್ಲ. ಮಾಧ್ಯಮಗಳೂ ನನ್ನನ್ನು ಅದೇ ದೃಷ್ಟಿಕೋನದಿಂದ ನೋಡುತ್ತವೆ. ಹೀಗಾಗಿ ನನ್ನ ಸಾಧನೆ ಎಂಬುದಕ್ಕಿಂತಲೂ ಇಲಾಖೆಯಲ್ಲಿ ಆಗಿರುವ ಕೆಲಸಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಂವಿಧಾನ ಬದಲಿಸುತ್ತೇವೆಂಬ ಹೇಳಿಕೆ ನೀಡುವ ಮೂಲಕ ನೀವು ಸೃಷ್ಟಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ. ಏಕೆ ಹೀಗೆ?
ಸಂವಿಧಾನ ತಿದ್ದುಪಡಿಯಾಗಬೇಕೆಂಬ ದೃಷ್ಟಿಯಿಂದ ಈ ಮಾತು ಹೇಳಿದ್ದೆ. ಆದರೆ, ಶಬ್ದಗಳು ಬದಲಾಗಿ ವಿವಾದ ಸೃಷ್ಟಿಯಾಯಿತು. ಆದರೆ,
ಕಾಂಗ್ರೆಸ್‌ಗೆ ಒಂದು ವಿಷಯ ಬೇಕಿತ್ತು. ಇದನ್ನೇ ಮುಂದಿಟ್ಟುಕೊಂಡು ನಮ್ಮ ವಿರುದಟಛಿ ದಲಿತರನ್ನು ಎತ್ತಿಕಟ್ಟುವ ಮೂರ್ಖ ಪ್ರಯತ್ನ ಮಾಡುತ್ತಿದೆ. ಆದರೆ, ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ, ನನ್ನನ್ನು ಹತ್ತಿರದಿಂದ ಬಲ್ಲ ದಲಿತ ಬಂಧುಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವೈಯಕ್ತಿಕವಾಗಿಯೇ ಇರಲಿ, ಸಾಮಾಜಿಕ ಬದುಕಿನಲ್ಲೇ ಇರಲಿ ಯಾವತ್ತೂ ಜಾತಿ ರಾಜಕಾರಣ ಮಾಡಿದವನು ನಾನಲ್ಲ ಎಂಬುದು ಅವರಿಗೆ ಗೊತ್ತಿದೆ. ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ. ಎಷ್ಟು ಬಾರಿ ಅವರು ಸಂವಿಧಾನ ತಿದ್ದುಪಡಿ ಮಾಡಿಲ್ಲ? ಸಂವಿಧಾನದ ಪೀಠಿಕೆಯನ್ನೇ ಬದಲಿಸಿದವರು ಅವರು. ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಸ್ವರೂಪವನ್ನೇ ಬದಲಿಸಿದ ಅಪಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ರಾಜ್ಯ ರಾಜಕಾರಣಕ್ಕೆ ಬರುತ್ತೀರಂತೆ?
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಆದರೂ ಆ ರೀತಿ ಅಂದುಕೊಂಡು ಕಾಂಗ್ರೆಸ್ ಈ ಎಲ್ಲಾ ಕುತಂತ್ರಗಳನ್ನು ಮಾಡುತ್ತಿದೆ. ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆಂಬ ಅವರ ಯೋಚನೆ ಅವರಿಗೆ ತಲೆನೋವು ತಂದಿದೆ. ಹೀಗಾಗಿ ನನ್ನ
ಇಮೇಜ್‌ಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ ನನಗೆ ರಾಜಕಾರಣದಲ್ಲಿ ಆಸಕ್ತಿಯೇ ಇಲ್ಲ. ಮೊದಲಿ
ನಿಂದಲೂ ಸಂಘಟನೆಯಲ್ಲಿ ಬೆಳೆದು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದೆ. ವಿಧಾನಸಭೆ, ಲೋಕಸಭೆ ಉಪ ಚುನಾವಣೆಗಳ ಫಲಿತಾಂಶ ಕೇಂದ್ರದ ವಿರುದ್ಧ ಬರುತ್ತಿದೆ. ಕೇಂದ್ರದ ವಿರುದಟಛಿ ಜನಾಭಿಪ್ರಾಯದ ಮುನ್ಸೂಚನೆಯೇ ಇದು?
ಇಲ್ಲ, ಇದರ ಪರಿಣಾಮ 2019ರ ಲೋಕಸಭೆ ಚುನಾವಣೆ ಮೇಲೆ ಬೀರುವುದಿಲ್ಲ. ಆ ಚುನಾವಣೆಯ ಓಘವೇ ಬೇರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಯಶಸ್ವಿಯಾಗಿ ಮಾಡುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬುದ್ಧಿ ಜೀವಿಗಳ ಮೇಲೇಕೆ ನಿಮಗೆ ಆಕ್ರೋಶ?
ಖಂಡಿತವಾಗಿಯೂ ಬುದ್ಧಿ ಜೀವಿಗಳ ಮೇಲೆ ಆಕ್ರೋಶವಿಲ್ಲ. ಆದರೆ, ಸೋಕಾಲ್ಡ್ ಬುದಿಟಛಿಜೀವಿಗಳ ಬಗ್ಗೆ ನನಗೆ ಆಕ್ಷೇಪವಿದೆ. ಅವರೆಲ್ಲರೂ ಕೆಂಪಂಗಿ ದಳದವರು. ವಿತಂಡವಾದವೇ ಅವರ ವಾದ. ರಾಷ್ಟ್ರೀಯತೆ ವಿರೋಧಿಸುವುದೇ ಅವರ ಸಿದಾಟಛಿಂತ. ಅವಾಸ್ತವಿಕ ಭ್ರಮೆಯ ವಿಚಾರಗಳನ್ನೇ ಜನರ ಮುಂದೆ ಮಂಡಿಸಿ ಚರ್ಚೆಗೆ ಒಳಪಡಿಸುತ್ತಾರೆಯೇ ವಿನಃ ಸಮುದಾಯಕ್ಕೆ ಒಳ್ಳೆಯದಾಗುವ ವಿಚಾರಗಳನ್ನು ಹೇಳುವುದಿಲ್ಲ. ಅವರಿಗೆ ವೈಚಾರಿಕ ಸ್ಪಷ್ಟತೆಯೇ ಇಲ್ಲ. ಅದಕ್ಕಾಗಿಯೇ ಸೋಕಾಲ್ಡ್ ಬುದಿಟಛಿಜೀವಿಗಳನ್ನು ವಿರೋಧಿಸುತ್ತೇನೆ ಪ್ರದೀಪ್ ಕುಮಾರ್ ಎಂ