Advertisement

ಖಾದ್ಯತೈಲದಲ್ಲಿ ಭಾರತ ಸ್ವಾವಲಿಂಬಿಯಾಗಬೇಕಿದೆ: ಶೋಭಾ ಕರಂದ್ಲಾಜೆ

11:44 PM Mar 08, 2022 | Team Udayavani |

ಬೆಂಗಳೂರು: ಭಾರತವು ಇಂದಿಗೂ ಖಾದ್ಯ ತೈಲಕ್ಕೆ ವಿದೇಶಗಳನ್ನೇ ಆಶ್ರಯಿಸಿರುವ ಪರಿಣಾಮ, ಅತಿ ಕೆಟ್ಟ ಖಾದ್ಯ ತೈಲಗಳು ಭಾರತಕ್ಕೆ ಸರಬರಾಜು ಆಗುತ್ತಿವೆ. ಗುಣಮಟ್ಟದ ತೈಲವನ್ನು ಪಡೆಯಬೇಕಾದರೆ ಖಾದ್ಯತೈಲ ಉತ್ಪಾದನೆಯಲ್ಲಿ ನಮ್ಮ ದೇಶವು ಸ್ವಾವಲಂಬನೆ ಸಾಧಿಸಬೇಕಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಎಫ್ ಕೆಸಿಸಿಐ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಮಲೇಷಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಗುಣಮಟ್ಟದ ಖಾದ್ಯತೈಲಗಳು ಆಮದು ಆಗುತ್ತಿಲ್ಲ. ಅಲ್ಲಿಂದ ಬಂದ ಅನಂತರ ಕಂಪೆನಿಗಳು ತಮ್ಮ ಬ್ರ್ಯಾಂಡ್‌ ಹಾಕಿಕೊಂಡು ಎಣ್ಣೆ ತಯಾರಿಸುತ್ತವೆ. ಹೀಗಾಗಿ, ದೇಶದಲ್ಲಿ ಉತ್ತಮ ಖಾದ್ಯತೈಲ ಉತ್ಪಾದನೆ ಮಾಡಬೇಕಿದೆ ಎಂದು ಹೇಳಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ ಸ್ವೀಕರಿಸಿದರು. ಕೈಗಾರಿಕೆಗಳು ಮತ್ತು ವಾಣಿಜ್ಯ ನಿರ್ದೇಶನಾಲಯದ ಆಯುಕ್ತ ಗುಂಜನ್‌ ಕೃಷ್ಣಾ, ಆದಾಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಸೇರಿದಂತೆ ಹಲವರು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next