Advertisement

ಇಂದು ದಕ್ಷಿಣ ಏಷ್ಯಾ ಉಪಗ್ರಹ ನಭಕ್ಕೆ

12:07 PM May 05, 2017 | Team Udayavani |

ಚೆನ್ನೈ: ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂವಹನ ಉಪಗ್ರಹ ಜಿಸ್ಯಾಟ್‌-9 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತಿದ್ದು, ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ಇದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹವಾಮಾನ ಸಮತೋಲನದಿಂದ ಇದ್ದಲ್ಲಿ ಸಂಜೆ 4.57ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಪಗ್ರಹ ಇದಾಗಿದೆ. 2014ರಲ್ಲಿ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ ಸಾರ್ಕ್‌ ರಾಷ್ಟ್ರಗಳ ಸಂವಹನಕ್ಕೊಂದು ಉಪಗ್ರಹ ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು. ಅದೇ ಪ್ರಕಾರ ಕಳೆದ ಭಾನುವಾರದ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಇದನ್ನು ಪ್ರಸ್ತಾಪಿಸಿ, ಈ ಉಪಗ್ರಹ ‘ಭಾರತದ ಗಿಫ್ಟ್’ ಎಂದು ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next