Advertisement

India Series: ನ್ಯೂಜಿಲ್ಯಾಂಡ್‌ ವನಿತಾ ಕ್ರಿಕೆಟ್‌ ತಂಡ ಪ್ರಕಟ

11:08 PM Oct 22, 2024 | Team Udayavani |

ಕ್ರೈಸ್ಟ್‌ಚರ್ಚ್‌: ಭಾರತದಲ್ಲಿ ಆಡಲಾಗುವ 3 ಪಂದ್ಯಗಳ ಏಕದಿನ ಸರಣಿಗಾಗಿ 15 ಸದಸ್ಯರ ನ್ಯೂಜಿಲ್ಯಾಂಡ್‌ ವನಿತಾ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದೆ. ವಿಕೆಟ್‌ ಕೀಪರ್‌ ಬ್ಯಾಟರ್‌ ಪೋಲಿ ಇಂಗ್ಲಿಸ್‌ ಮೊದಲ ಸಲ ಕಿವೀಸ್‌ ತಂಡದೊಂದಿಗೆ ಪ್ರವಾಸಕ್ಕೆ ಅಣಿಯಾಗಿದ್ದಾರೆ.

Advertisement

ತಾಯ್ತನದ ರಜೆ ಪೂರೈಸಿದ ಲಾರೆನ್‌ ಡೌನ್‌ ತಂಡಕ್ಕೆ ವಾಪಸಾಗಿದ್ದಾರೆ. ಟಿ20 ವಿಶ್ವಕಪ್‌ ವಿಜೇತ ತಂಡದಲ್ಲಿದ್ದ ರೋಸ್‌ಮೇರಿ ಮೈರ್‌ ಮತ್ತು ಲೀಗ್‌ ಕಾಸ್ಪರೆಕ್‌ ಮಾತ್ರ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ.

ಸರಣಿಯ ಮೂರೂ ಪಂದ್ಯಗಳ ತಾಣ ಅಹ್ಮದಾಬಾದ್‌ (ಅ. 24, 27, 29).

ನ್ಯೂಜಿಲ್ಯಾಂಡ್‌ ತಂಡ: ಸೋಫಿ ಡಿವೈನ್‌ (ನಾಯಕಿ), ಸುಝೀ ಬೇಟ್ಸ್‌, ಈಡನ್‌ ಕಾರ್ಸನ್‌, ಲಾರೆನ್‌ ಡೌನ್‌, ಇಝಿ ಗೇಝ್, ಮ್ಯಾಡ್ಡಿ ಗ್ರೀನ್‌, ಬ್ರೂಕ್‌ ಹಾಲಿಡೇ, ಪೋಲಿ ಇಂಗ್ಲಿಸ್‌, ಫ್ರಾನ್‌ ಜೊನಾಸ್‌, ಜೆಸ್‌ ಕೆರ್‌, ಮೆಲೀ ಕೆರ್‌, ಮೋಲಿ ಪೆನ್‌ಫೋಲ್ಡ್‌, ಜಾರ್ಜಿಯಾ ಪ್ಲಿಮ್ಮರ್‌, ಹನ್ನಾ ರೋವ್‌, ಲೀ ಟಹುಹು.

Advertisement

Udayavani is now on Telegram. Click here to join our channel and stay updated with the latest news.

Next