Advertisement

1951-2023: ಮತದಾರರ ಸಂಖ್ಯೆ 6 ಪಟ್ಟು ಹೆಚ್ಚಳ

08:00 PM Feb 05, 2023 | Team Udayavani |

ದೇಶವು ಮೊದಲ ಸಾರ್ವತ್ರಿಕ ಚುನಾವಣೆಯನ್ನು ಕಂಡ 1951ರಿಂದ ಈವರೆಗೆ ಮತದಾರರ ಸಂಖ್ಯೆಯಲ್ಲಿ 6 ಪಟ್ಟು ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷದ ಜ.1ಕ್ಕೆ ಸುಮಾರು 94.50 ಕೋಟಿ ಭಾರತೀಯರು ಚುನಾವಣೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈ ಪೈಕಿ ಮೂರನೇ ಒಂದರಷ್ಟು ಮಂದಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಿಲ್ಲ. ಮತದಾರರನ್ನು ಮತಕೇಂದ್ರಗಳತ್ತ ಕರೆದು ತರುವುದೇ ಈಗ ಚುನಾವಣಾ ಆಯೋಗದ ಮುಂದಿರುವ ಸವಾಲು.

Advertisement

ಆಸಕ್ತಿಯೇ ಇಲ್ಲ
2019ರ ಲೋಕಸಭೆ ಚುನಾವಣೆಯಲ್ಲಿ ಶೇ.75ರಷ್ಟು ಮತದಾನ ದಾಖಲಾದರೂ, 30 ಕೋಟಿ ಮತದಾರರು ಮತಕೇಂದ್ರಗಳತ್ತ ಸುಳಿದಿಲ್ಲ. ಈ 30 ಕೋಟಿ ಮಿಸ್ಸಿಂಗ್‌ ಮತದಾರರಲ್ಲಿ ನಗರಪ್ರದೇಶದವರು, ಯುವಕರು ಮತ್ತು ವಲಸಿಗರೇ ಹೆಚ್ಚು ಎನ್ನುತ್ತದೆ ಚುನಾವಣಾ ಆಯೋಗ.

1951ರ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಮತದಾರರು- 17.32 ಕೋಟಿ
ಮೊದಲ ಚುನಾವಣೆಯಲ್ಲಿ ದಾಖಲಾದ ಮತದಾನ- ಶೇ.45.67
2023ರ ಜ.1ರಂದು ದೇಶದಲ್ಲಿರುವ ಒಟ್ಟು ಮತದಾರರು- 94,50,25,694
1951ರಿಂದ 2023ರವರೆಗೆ ಮತದಾರರ ಸಂಖ್ಯೆಯಲ್ಲಾದ ಹೆಚ್ಚಳ- 6 ಪಟ್ಟು

ವರ್ಷ    ಮತದಾರರು     ದಾಖಲಾದ ಮತದಾನ
1951        17.32 ಕೋಟಿ               ಶೇ.45.67
1957       19.37 ಕೋಟಿ               ಶೇ.47.74
1962       21.64 ಕೋಟಿ              ಶೇ.55.42
2009       71.70 ಕೋಟಿ             ಶೇ.58.21
2014       83.40 ಕೋಟಿ             ಶೇ.66.44
2019       91.20 ಕೋಟಿ             ಶೇ.67.40

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next