ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ18,166 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು 214 ದಿನಗಳಲ್ಲಿ ದಿನವೊಂದರಲ್ಲಿ ಪತ್ತೆಯಾದ ಕನಿಷ್ಠ ಪ್ರಕರಣಗಳು ಎಂದು ಭಾನುವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಭಾರತದಲ್ಲಿ ಒಟ್ಟು 3,39,53,475 ಪಾಸಿಟಿವ್ ಕೇಸ್‍ಗಳಲ್ಲಿ 2,30,979 ಪಾಸಿಟಿವ್ ಕೇಸ್‍ಗಳು ಸಕ್ರೀಯವಾಗಿದ್ದು, ಇದು 208 ದಿನಗಳಲ್ಲಿ ಕಡಿಮೆ ಪಾಸಿಟಿವ್ ಕೇಸ್‍ಗಳು ಎಂದು ವರದಿಯಾಗಿದೆ.
ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರಿಶ್ರಮದಿಂದ ಸತತ 105 ದಿನಗಳಿಂದ ಒಂದು ದಿನದಲ್ಲಿ 50,000ಕ್ಕಿಂತ ಕಡಿಮೆ ಕೇಸ್‍ಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಚೇತರಿಕೆ ಕಂಡ ಹೋಟೆಲ್, ಪ್ರವಾಸೋದ್ಯಮ
ಶನಿವಾರದಿಂದ ಭಾನುವಾರ ಬೆಳಗ್ಗಿನವರೆಗೆ ಕೋವಿಡ್‍ನಿಂದ 214 ಜನರು ಮೃತ ಪಟ್ಟಿದ್ದಾರೆ. 23,624 ಜನರು ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ ಈಗ 4,50,589 ಕ್ಕೆ ತಲುಪಿದೆ. ಸಾಂಕ್ರಾಮಿಕ ರೋಗ ಆರಂಭದ ದಿನದಿಂದ ಇಲ್ಲಿಯವರೆಗೆ, 3,32,71,915 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಚೇತರಿಕೆಯ ದರ 97.99% ರಷ್ಟು ಇದೆ. ಇದು ಮಾರ್ಚ್ 2020ರ ನಂತರ ಗರಿಷ್ಟ ಚೇತರಿಕೆ ದರವಾಗಿದೆ.