Advertisement

Advanced Radar System: ರಷ್ಯಾ ಆಧುನಿಕ ರಾಡಾರ್‌ ವ್ಯವಸ್ಥೆ ಭಾರತಕ್ಕೆ ನೀಡಿಕೆ?

11:13 PM Dec 11, 2024 | Team Udayavani |

ನವದೆಹಲಿ: ಭಾರತದ ವಿರುದ್ಧ ಶತ್ರು ರಾಷ್ಟ್ರಗಳು ನಡೆಸುವ ವೈಮಾನಿಕ ದಾಳಿ ಯನ್ನು ಪತ್ತೆಹಚ್ಚಿ ಹಿಮ್ಮೆಟ್ಟಿಸುವ ರಷ್ಯಾದ ಅತ್ಯಾಧುನಿಕ ವೊರೊನೆಜ್‌ ರಾಡರ್‌ ವ್ಯವಸ್ಥೆಯು ಶೀಘ್ರವೇ ಕರ್ನಾಟಕದ ಚಿತ್ರದುರ್ಗದಲ್ಲಿ ಸ್ಥಾಪನೆಯಾಗಲಿದೆ.!

Advertisement

ಈ ಸಂಬಂಧ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃ ತ್ವದ ನಿಯೋಗ, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ‌ನ್ನು ಭೇಟಿ ಮಾಡಿ ರಕ್ಷಣೆ ಸಹಭಾಗಿತ್ವಕ್ಕೆ ಮಾತು ಕತೆ ನಡೆಸಿ, ಒಟ್ಟು 4 ಶತಕೋಟಿ ಡಾಲರ್‌ (34 ಸಾವಿರ ಕೋಟಿ ರೂ.) ಒಪ್ಪಂದ ಮಾಡಿಕೊಂಡಿದೆ. ರಷ್ಯಾದ ಅಲ್ಮಾಜ್‌ ಆಂಟೆ ಕಾರ್ಪೋ ರೇಷನ್‌ ನಿರ್ಮಿಸುವ ಈ ವೊರೊನೆಜ್‌ ರಾಡಾರ್‌ ಉಪ ಕರಣಗಳಿಗೆ ಸಂಬಂಧಿ ಸಿದಂತೆ ಮಾತುಕತೆ ನಡೆಸಿ, ಈ ಬಗ್ಗೆ ಸಮೀಕ್ಷೆಯನ್ನೂ ಕೈಗೊಳ್ಳಲಾಗಿದೆ.

ವ್ಯವಸ್ಥೆ ಸಾಮರ್ಥ್ಯ: ವೊರೊನೆಜ್‌ ರಾಡಾರ್‌ 8000 ಕಿ.ಮೀ.ಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಬಹು ಶ್ರೇಣಿಯ ಮುಂಚಿನ ಎಚ್ಚರಿಕೆ ನೀಡುವ ವ್ಯವಸ್ಥೆ. ಅದು ಬ್ಯಾಲೆಸ್ಟಿಕ್‌ ಕ್ಷಿಪಣಿಗಳು, ಫೈಟರ್‌ ಜೆಟ್‌, ಖಂಡಾಂತರ ಕ್ಷಿಪಣಿಗಳ ದಾಳಿ ಗುರುತಿಸಲು ಗುರುತಿಸಲು ಮತ್ತು ನಿಗಾ ಇರಿಸಲು ಸಮರ್ಥವಾಗಿದೆ.
ಭಾರತಕ್ಕೆ ಉಪಕಾರಿ ಹೇಗೆ: ಈ ವ್ಯವಸ್ಥೆ ಭಾರತಕ್ಕೂ ಲಭ್ಯವಾದರೆ ಚೀನಾ, ದಕ್ಷಿಣ ಮತ್ತು ಮಧ್ಯ ಏಷ್ಯಾ ಮತ್ತು ಹಿಂದೂ ಮಹಾಸಾಗರದ ಬಹುತೇಕ ಭಾಗಗಳಲ್ಲಿ ಎಲ್ಲಿಂದಲಾದರೂ ಯಾವುದೇ ವಾಯು ದಾಳಿಯನ್ನು ಪತ್ತೆಹಚ್ಚಲು ಸಾಧ್ಯ ವಾಗಲಿದ್ದು, ದಾಳಿ ತಡೆಗಟ್ಟಬಹುದು.

ವೊರೊನೆಜ್‌ ವೈಶಿಷ್ಟéವೇನು?
8000 ಕಿ.ಮೀ. ವ್ಯಾಪ್ತಿಯ ಅಂತರವಿದ್ದರೂ ದಾಳಿಯನ್ನು ಗುರುತಿಸಿ ಎಚ್ಚರಿಸಬಲ್ಲದು ಖಂಡಾಂತರ ಕ್ಷಿಪಣಿ, ಯುದ್ಧ ವಿಮಾನಗಳ ದಾಳಿಯ ಸಮರ್ಥ ಗುರುತಿಸುವಿಕೆ ಏಕಕಾಲಕ್ಕೆ 5000ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸಬಲ್ಲದು ಕಣ್ಣು ತಪ್ಪಿಸಬಲ್ಲ ಡ್ರೋನ್‌ ಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಸಾಮೃರ್ಥ್ಯ
ಚೀನಾ, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಶತ್ರುಗಳ ದಾಳಿ ಪತ್ತೆ ಹಚ್ಚಲು ಭಾರತಕ್ಕೆ ಸಹಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next