ಹೊಸದಿಲ್ಲಿ: ಭಾರತದ ಕುಬೇರರ ಪಟ್ಟಿಯನ್ನು ಫೋಬ್ಸ್ì ಗುರುವಾರ ಪ್ರಕಟಿಸಿದೆ. ಹೊಸ ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಅವರೇ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಗಮನಾರ್ಹ ಅಂಶ ಏನೆಂದರೆ ಸತತ 100ನೇ ವರ್ಷದಲ್ಲೂ ಮುಖೇಶ್ ಹೆಚ್ಚು ಕಡಿಮೆ 2.5 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಯಥಾಸ್ಥಾನದಲ್ಲಿದ್ದಾರೆ.
ಪ್ರತಿವರ್ಷ ಕುಬೇರರ ಪಟ್ಟಿ ಬಿಡುಗಡೆ ಮಾಡುವ ಪ್ರತಿಷ್ಠಿತ ಸಂಸ್ಥೆ ಫೋಬ್ಸ್ì ಪ್ರಕಾರ ಆರ್ಥಿಕ ಕುಸಿತದ ನಡುವೆಯೂ ಸರಾಸರಿ 26%ರಷ್ಟು ಆಸ್ತಿ ಹೆಚ್ಚಿಸಿಕೊಂಡಿರುವ 100 ಮಂದಿಯ ಪಟ್ಟಿ ಸಿದ್ಧಪಡಿಸಿದೆ. 2ನೇ ಸ್ಥಾನದಲ್ಲಿ ದಿಗ್ಗಜ ಐಟಿ ಕಂಪನಿ ವಿಪ್ರೋ ಮಾಲೀಕ ಅಜೀಂ ಪ್ರೇಮ್‌ಜೀ ಇದ್ದು, ಅವರ ಒಟ್ಟು ಆಸ್ತಿ 1.2 ಲಕ್ಷ ಕೋಟಿ ರೂ. ಆಗಿದೆ. ಪ್ರೇಮ್‌ಜೀ ಅವರು ಕಳೆದ ವರ್ಷಕ್ಕಿಂತ ಎರಡು ಸ್ಥಾನ ಮೇಲಕ್ಕೆ ಜಿಗಿತ ಕಂಡಿದ್ದಾರೆ.
ಮೋದಿ “ಬಹ್ಮಾಸ್ತ್ರ’ ಪರಿಣಾಮ ಕಾಣಲಿಲ್ಲ: ದೇಶದ ಕಪ್ಪುಹಣ ಸಂಗ್ರಹ ಹಾಗೂ ಭ್ರಷ್ಟಾಚಾರ ನಿರ್ಮೂಲನೆಯ ಹೆಸರಲ್ಲಿ ನಡೆಸಿದ ಅಪನಗದೀಕರಣದ ಪರಿಣಾಮ ಅನಿಲ-ತೈಲ ಕ್ಷೇತ್ರದ ಉದ್ಯಮಿ ಮುಖೇಶ್ ಅಂಬಾನಿ ಅವರಂಥ ಶತಕೋಟ್ಯಧಿಪತಿಗಳ ಮೇಲೆ ಆದಂತಿಲ್ಲ ಎಂದಿದೆ ಫೋಬ್ಸ್ì. ಈಗಲೂ ಮುಖೇಶ್, ಏಷ್ಯಾದ ಅತಿ ಶ್ರೀಮಂತರ ಮೊದಲ ಐದರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ಸೋದರ ಅನಿಲ್ ಅಂಬಾನಿ ಅವರು 20.500 ಕೋಟಿ ಆಸ್ತಿಯೊಂದಿಗೆ 45ನೇ ಸ್ಥಾನದಲ್ಲಿದ್ದು, 2016ರಲ್ಲಿ 32ನೇ ಸ್ಥಾನದಲ್ಲಿದ್ದರು.
ಮಹಿಳಾ ಪ್ರಾಬಲ್ಯ: “ನಾವೇನು ಕಡಿಮೆ ಇಲ್ಲ’ ಎನ್ನುವುದನ್ನು ವನಿತೆಯರೂ ಸಾಬೀತು ಪಡಿಸಿದ್ದಾರೆ. ಒಪಿ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ (16), ಯುಎಸ್‌ವಿ ಇಂಡಿಯಾದ ಒಡತಿ ಲೀನಾ ತೆವಾರಿ (71), ಬಯೋಕಾನ್‌ನ ಕಿರಣ್ ಮಜುಂದಾರ್ ಶಾ (72) ಸ್ಥಾನ ಪಡೆದುಕೊಂಡಿದ್ದಾರೆ.
31,00,000 ಕ್ಕೂ ಹೆಚ್ಚು ಆರ್ಥಿಕ ಕುಸಿತದ ನಡುವೆಯೂ 2017ರಲ್ಲಿ ಭಾರತೀಯ ಕುಬೇರರ ಆಸ್ತಿಯ ಒಟ್ಟಾರೆ ಹೆಚ್ಚಳ
ಪತಂಜಲಿ ಬಾಲಕೃಷ್ಣ ಗೆ 19ನೇ ಸ್ಥಾನಕ್ಕೆ ಬಡ್ತಿ
ಯೋಗ ಗುರು ಬಾಬಾ ರಾಮದೇವ್ ಪಾಲು ದಾರಿಕೆಯ ದೇಶಿ ಉತ್ಪನ್ನಗಳ ಹಾಗೂ ಆಯುರ್ವೇದ ಸಂಸ್ಥೆ ಪತಂಜಲಿಯ ಪಾಲುದಾರ ಬಾಲಕೃಷ್ಣ ಆಚಾರ್ಯ 48ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಈಗ ಅವರ ಒಟ್ಟು ಆಸ್ತಿ ಅಂದಾಜು 43,000 ಕೋಟಿ.
ಟಾಪ್ 5 ಕುಬೇರರು
2.5 ಲಕ್ಷ ಕೋಟಿ: ಮುಖೇಶ್ ಅಂಬಾನಿ
1.2 ಲಕ್ಷ ಕೋಟಿ: ಅಜೀಂ ಪ್ರೇಮ್‌ಜೀ
1.1 ಲಕ್ಷ ಕೋಟಿ: ಹಿಂದುಜಾ ಸೋದರರು
1.0 ಲಕ್ಷ ಕೋಟಿ: ಲಕ್ಷ್ಮೀ ಮಿತ್ತಲ್
1.0 ಲಕ್ಷ ಕೋಟಿ: ಪಲ್ಲೋಂಜಿ ಮಿಸ್ತ್ರಿ