ದುಬಾೖ: ಶುಕ್ರವಾರದ ಸಭೆಯಲ್ಲಿ ಐಸಿಸಿ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
2021ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ವೇಳಾಪಟ್ಟಿಯಂತೆ ಸಾಗಲಿದೆ.
ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್, 2022ರಲ್ಲಿ ಕಾಂಗರೂ ನಾಡಿನಲ್ಲೇ ನಡೆಯಲಿದೆ.
ಈ ವರ್ಷದ ಟಿ20 ವಿಶ್ವಕಪ್ ಕೂಟವನ್ನು ಮುಂದೂಡಲಾಗಿದೆ ಎಂದಷ್ಟೇ ಐಸಿಸಿ ಕಳೆದ ಸಭೆಯಲ್ಲಿ ಪ್ರಕಟಿಸಿತ್ತು.
ಮುಂದಿನ ವರ್ಷ ಫೆ. 6ರಿಂದ ಮಾ.7ರವರೆಗೆ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಬೇಕಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು 2022ರ ವರೆಗೆ ಮುಂದೂಡಲಾಗಿದೆ.
ಆಸ್ಟ್ರೇಲಿಯ ಆತಿಥ್ಯದ ಈ ವರ್ಷದ ಟಿ20 ವಿಶ್ವಕಪ್ 2021ರಲ್ಲೂ, ಭಾರತದ 2021ರ ಟಿ20 ವಿಶ್ವಕಪ್ 2022ರಲ್ಲಿ ನಡೆಯಬಹುದೆಂದು ಭಾವಿಸಲಾಗಿತ್ತು.