ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದ್ದ 156 ದೇಶಗಳ ಪ್ರವಾಸಿಗರ ಇ-ವೀಸಾವನ್ನು ಕೇಂದ್ರ ಸರ್ಕಾರ ಅದನ್ನು ಪುನಃಸ್ಥಾಪಿಸಿದೆ.
ಇದರ ಜತೆಗೆ ಎಲ್ಲಾ ದೇಶಗಳಿಗೆ ಅನ್ವಯವಾಗುವ ಸಾಮಾನ್ಯ ವೀಸಾಗಳನ್ನೂ ಮತ್ತೆ ತಕ್ಷಣದಿಂದ ಊರ್ಜಿತಗೊಳಿಸಿದೆ.
ಅಮೆರಿಕ ಮತ್ತು ಜಪಾನ್ ಪ್ರಜೆಗಳಿಗೆ ಹತ್ತು ವರ್ಷಗಳ ನೀಡಲಾಗುವ ಪ್ರವಾಸಿ ವೀಸಾಗಳನ್ನೂ ಪುನಸ್ಥಾಪಿಸಲಾಗಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಬುಧವಾರ ನವದೆಹಲಿಯಲ್ಲಿ ಪ್ರಕಟಣೆಯನ್ನೂ ನೀಡಿದೆ. ಇ-ವೀಸಾಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಸೋಂಕಿನ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ರದ್ದುಗೊಳಿಸಲಾಗಿತ್ತು.
156 ರಾಷ್ಟ್ರಗಳ ಪ್ರಜೆಗಳಿಗೆ 2019 ವೀಸಾ ನಿಯಮಗಳ ಅನ್ವಯ ಹೊಸ ಇ-ವೀಸಾ ಪಡೆಯಲು ಅರ್ಹರಾಗಿರುತ್ತಾರೆ. ಸಾಮಾನ್ಯ ವೀಸಾ (ಪೇಪರ್ ವೀಸಾ)ವನ್ನೂ ಮುಂದುವರಿಸಲಾಗುತ್ತದೆ.