ನವದೆಹಲಿ:ಭಾರತದಲ್ಲಿ ಮಾರಣಾಂತಿಕ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿರುವ ನಡುವೆ ಕಳೆದ 24ಗಂಟೆಗಳಲ್ಲಿ ದಾಖಲೆಯ 3,92,488 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಎಚ್ಚರಿಕೆಯ ಕರೆಗಂಟೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಂಚರಾಜ್ಯ ಫಲಿತಾಂಶ: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಮೇಲುಗೈ, ಎಜೆಪಿಗೆ ತೀವ್ರ ಹಿನ್ನಡೆ
ಭಾನುವಾರ(ಮೇ 2) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ, ಕಳೆದ 24ಗಂಟೆಯಲ್ಲಿ 3,689 ಸಾವು ಸಂಭವಿಸಿದ್ದು, 3,07,865 ರೋಗಿಗಳು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದೆ.
ಭಾರತದಲ್ಲಿ ಒಟ್ಟು ಕೋವಿಡ್ ಸೋಂಕು ಪ್ರಕರಣ 1.95ಕೋಟಿಗೆ ಏರಿಕೆಯಾಗಿದ್ದು, 33,49,644 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಅಂಕಿಅಂಶದ ಪ್ರಕಾರ, ಕೋವಿಡ್ 19 ಸೋಂಕಿಗೆ ಈವರೆಗೆ 2,15ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1,59,92,271 ಮಂದಿ ಗುಣಮುಖರಾಗಿದ್ದಾರೆ.
ಶನಿವಾರ(ಮೇ 1) ದೇಶದಲ್ಲಿ ದಾಖಲೆಯ 4 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದು ಇಡೀ ವಿಶ್ವದಲ್ಲಿಯೇ ಒಂದೇ ದಿನ ಪತ್ತೆಯಾದ ಅತೀ ಹೆಚ್ಚಿನ ಪ್ರಕರಣವಾಗಿತ್ತು ಎಂದು ವರದಿ ತಿಳಿಸಿದೆ.