ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 31,443 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದು ಕಳೆದ 118 ದಿನಗಳಲ್ಲೇ ಒಂದು ದಿನ ಪತ್ತೆಯಾದ ಅತೀ ಕಡಿಮೆ ಸೋಂಕು ಪ್ರಕರಣವಾಗಿದೆ.
ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲೂ ಕುಂಠಿತವಾಗಿದೆ. ಸದ್ಯ ದೇಶದಲ್ಲಿ 4,31,315 ಸಕ್ರಿಯ ಸೋಂಕು ಪ್ರಕರಣಗಳಿವೆ. ಇದು ಕಳೆದ 109 ದಿನದಲ್ಲಿ ಅತೀ ಕಡಿಮೆಯಾಗಿದೆ.
ಇದನ್ನೂ ಓದಿ:3ನೇ ಅಲೆ ಖಚಿತ : ಸರ್ಕಾರಗಳು ಹಾಗೂ ಜನರು ಮೈಮರೆತಿರುವುದರ ಬಗ್ಗೆ ಐಎಂಎ ಕಳವಳ
ಕಳೆದ 24 ಅವಧಿಯಲ್ಲಿ 49,007 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಪಾಸಿಟಿವಿಟಿ ದರ 97.28ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ 2,020 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ದೇಶದಲ್ಲಿ 4,10,784 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 40 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದುವೆಗೆ ದೇಶದಲ್ಲಿ ಒಟ್ಟು 38.14 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.