ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 43,263 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 338 ಮಂದಿ ಸಾವನ್ನಪ್ಪಿದ್ದಾರೆಂದು ಇಂದು(ಸಪ್ಟೆಂಬರ್ 9, ಗುರುವಾರ) ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,93,614 ಕ್ಕೆ ತಲುಪಿದ್ದು, ಒಟ್ಟು ದಾಖಲಾಗಿರುವ ಸೋಂಕಿನ ಪ್ರಕರಣಗಲ್ಲಿ ಶೇಕಡಾ 1.19 ರಷ್ಟು ಸಕ್ರಿಯ ಪ್ರಕರಣಗಳು ಇವೆ ಎಂದು ಸಚಿವಾಲಯ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ. ಕಳೆದೊಂದು ದಿನದಲ್ಲಿ 40,567 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಾದ್ಯಂತ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3,23,04,618ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ವೈರಲ್ ವೀಡಿಯೋ : ಚಿನ್ನದ ಹುಡುಗ ನೀರಜ್ ಗೆ ಅಡುಗೆ ಮಾಡಿ ಬಡಿಸಿದ ಸಿಎಂ ಅಮರಿಂದರ್ ಸಿಂಗ್.!
ಇನ್ನು, ಒಟ್ಟು ದೇಶದಾದ್ಯಂತ ಈವರೆಗೆ 3,31,39,981 ಮಂದಿಗೆ ಸೋಂಕು ತಗುಲಿದೆ. ಸೋಂಕಿನ ವಾರದ ಪಾಸಿಟಿವಿಟಿ ರೇಟ್ ಶೇಕಡಾ 2.43 ಇದ್ದರೇ, ದೈನಂದಿನ ಪಾಸಿಟಿವಿಟ ರೇಟ್ ಶೇಕಡಾ 2.38 ರಷ್ಟಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ.
ದೇಶದಾದ್ಯಂತ ಈವರೆಗೆ 53.68 ಕೋಟಿಯಷ್ಟು ಮಂದಿಗೆ ಸೋಂಕಿನ ಪರೀಕ್ಷೆಯನ್ನು ಮಾಡಲಾಗಿದೆ. ಇನ್ನು, ಈವರೆಗೆ ಭಾರತದಾದ್ಯಂತ 71,65,97,428 ಮಂದಿಗೆ ಕೋವಿಡ್ ಸೋಂಕಿನ ಲಸಿಕೆಯನ್ನು ನೀಡಲಾಗಿದೆ. ಕಳೆದೊಂದು ದಿನದಲ್ಲಿ 86,51,701 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಭಾರತೀಯ ಔಷದ ನಿಯಂತ್ರಣ ಮಂಡಳಿ ತಿಳಿಸಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ಗೋಮಯದಲ್ಲಿ ತಯಾರಾಯಿತು ಗೌರಿ ಗಣೇಶ ಮೂರ್ತಿ : ಪರಿಸರ ಸ್ನೇಹಿ ಗಣಪನಿಗೆ ಹೆಚ್ಚಾಯ್ತು ಬೇಡಿಕೆ