ನವ ದೆಹಲಿ : ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕೊಂಚ ಇಳಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 36, 083 ಹೊಸ ಕೋವಿಡ್ ಸೋಂಕು ದಾಖಲಾಗಿದ್ದು, 493 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆಂದು ಇಂದು ( ಆದಿತ್ಯವಾರ, ಆಗಸ್ಟ್ 15) ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲು ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಸ್ವಾತಂತ್ರ್ಯಕ್ಕೆ ಬೆಳ್ತಂಗಡಿಗೆ ಒಲಿದು ಬಂತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅವಾರ್ಡ್..!
ದಿನವೊಂದರಲ್ಲಿ 37, 927 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3, 13, 76, 015 ಕ್ಕೆ ಏರಿಕೆಯಾಗಿದೆ. ಒಟ್ಟು ಚೇತರಿಕೆಯ ಪ್ರಮಾಣ ಶೇಕಡಾ 97. 46ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ವಾರದ ಪಾಸಿಟಿವಿಟಿ ರೇಟ್ ಇಡೀ ದೇಶದಾದ್ಯಂತ ಶೇಕಡಾ, 2.0 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 1.88ಕ ರಷ್ಟಿದೆ ಎಂದಿದೆ.
ಇನ್ನು, ಈವರೆಗೇ ದೇಶದಾದ್ಯಂತ 49. 36 ಕೋಟಿಯಷ್ಟು ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು, 45, 60, 33, 754 ಕೋವಿಡ್ ಡೋಸ್ ಗಳನ್ನು ಈವರೆಗೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : 75 ನೇ ಸ್ವಾತಂತ್ರ್ಯ : ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ: ಮೋದಿ ಉವಾಚ..!