Advertisement

ಭಾರತ: ಮತ್ತೆ ದಾಖಲೆಯ 22,771 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 6.49 ಲಕ್ಷ

12:51 PM Jul 04, 2020 | Nagendra Trasi |

ನವದೆಹಲಿ: ದೇಶದಲ್ಲಿ ದಾಖಲೆಯ ಪ್ರಮಾಣ ಎಂಬಂತೆ ಕಳೆದ 24ಗಂಟೆಯಲ್ಲಿ 22,771 ಕೋವಿಡ್ 19 ಸೋಂಕು ಪೀಡಿತರ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 6,48,315ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದ ಪ್ರಕಾರ, ಶನಿವಾರ ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 6,48,315ಕ್ಕೆ ಏರಿಕೆಯಾಗಿದೆ, ಇದರಲ್ಲಿ 2,35,433 ಆ್ಯಕ್ಟಿವ್ ಪ್ರಕರಣಗಳು, ಅಲ್ಲದೇ ಈವರೆಗೆ 3,94,227 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್ 19 ವೈರಸ್ ನಿಂದ 18, 655 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರೋಗಿಗಳ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಳವಾಗಿದೆ. ಶೇ.60.80ರಷ್ಟು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ನಾಗಾಲೋಟ ಮುಂದುವರೆದಿದ್ದು, 1,92,990ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ಕೋವಿಡ್ 19 ಸೋಂಕಿಗೆ 198 ಮಂದಿ ಸಾವನ್ನಪ್ಪಿದ್ದರು. ಮಹಾರಾಷ್ಟ್ರದಲ್ಲಿ ಈವರೆಗೆ 8,376 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next