Advertisement

ಭಾರತದಲ್ಲಿ ಐದು ಲಕ್ಷ ದಾಟಿದ ಕೋವಿಡ್ 19 ಪ್ರಕರಣ; 24ಗಂಟೆಯಲ್ಲಿ 18 ಸಾವಿರ ಕೇಸ್ ಪತ್ತೆ

01:16 PM Jun 27, 2020 | Nagendra Trasi |

ನವದೆಹಲಿ: ದೇಶಾದ್ಯಂತ ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿದ್ದು, ಕಳೆದ 24ಗಂಟೆಯಲ್ಲಿ ಬರೋಬ್ಬರಿ 18 ಸಾವಿರ ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಅಲ್ಲದೇ ಭಾರತದಲ್ಲಿ ಕೋವಿಡ್ 19 ಪ್ರಕರಣ 5 ಲಕ್ಷ ದಾಟಿರುವುದಾಗಿ ವರದಿ ತಿಳಿಸಿದೆ.

Advertisement

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಈವರೆಗೆ 5,089,53 ಕೋವಿಡ್ 19 ಪ್ರಕರಣ ದೃಢಪಟ್ಟಿದೆ. ಇದರಲ್ಲಿ 1,97,387 ಆ್ಯಕ್ಟೀವ್ ಪ್ರಕರಣಗಳಿದ್ದು, 2,95,881 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಕೋವಿಡ್ 19 ವೈರಸ್ ಗೆ 15,685 ಜನರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದೆ.

ಕಳೆದ 24ಗಂಟೆಯಲ್ಲಿ ಭಾರತದಲ್ಲಿ 18, 552 ಕೋವಿಡ್ 19 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 384 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 1ರ ನಂತರ ಭಾರತದಲ್ಲಿ 3.18ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.

ಮಹಾರಾಷ್ಟ್ರ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿದೆ. ಈವರೆಗೆ 1.52 ಲಕ್ಷ ಪ್ರಕರಣ ಪತ್ತೆಯಾಗಿದ್ದು, 7 ಸಾವಿರ ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 77,240 ಕೋವಿಡ್ 19 ಪ್ರಕರಣ ದೃಢಪಟ್ಟಿದೆ. ತಮಿಳುನಾಡಿನಲ್ಲಿ 74 ಸಾವಿರ ಪ್ರಕರಣ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next