Advertisement

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 10,197 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

11:29 AM Nov 17, 2021 | Team Udayavani |

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 10,197 ನೂತನ ಕೋವಿಡ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,44,66,598ಕ್ಕೆ ಏರಿಕೆಯಾಗಿದೆ ಎಂದು ಬುಧವಾರ(ನವೆಂಬರ್ 17) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಏನು ದನ ಕಾಯುತ್ತಿದ್ದಾರಾ?:ಎಸ್ ಪಿಗೆ ಕರೆ ಮಾಡಿ ಸಚಿವ ಈಶ್ವರಪ್ಪ ವಾರ್ನಿಂಗ್

ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,28,555ಕ್ಕೆ ಇಳಿಕೆಯಾಗಿದೆ. ಇದು 527 ದಿನಗಳಲ್ಲಿಯೇ ಕನಿಷ್ಠ ಸಂಖ್ಯೆಯಾಗಿದೆ ಎಂದು ಅಂಕಿಅಂಶ ವಿವರಿಸಿದೆ. ಕಳೆದ 24ಗಂಟೆಗಳಲ್ಲಿ 301ಕ್ಕೂ ಅಧಿಕ ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ದೇಶಾದ್ಯಂತ ಈವರೆಗೆ ಕೋವಿಡ್ ನಿಂದ 4,64,153 ಮಂದಿ ಸಾವನ್ನಪ್ಪಿದ್ದಾರೆ.

ಸತತ 40 ದಿನಗಳಿಂದ ದೇಶದಲ್ಲಿ 20,000 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ಕಳೆದ 44 ದಿನಗಳಿಂದ ದಿನದ ಪಾಸಿಟಿವಿಟಿ ದರ ಶೇ.2ಕ್ಕಿಂತ (0.82) ಕಡಿಮೆ ಇದ್ದು, ವಾರದ ಪಾಸಿಟಿವಿಟಿ ದರ ಶೇ.0.96ರಷ್ಟಿದೆ ಎಂದು ಅಂಕಿಅಂಶ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next