Advertisement

ಶೀಘ್ರ 650 ಅಂಚೆ ಬ್ಯಾಂಕ್‌

09:00 AM Apr 30, 2018 | Team Udayavani |

ಭೋಪಾಲ್‌: ಮುಂದಿನ ತಿಂಗಳ ಒಳಗಾಗಿ ದೇಶಾದ್ಯಂತ 650 ಅಂಚೆ ಬ್ಯಾಂಕ್‌ ಕಚೇರಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಹಾಯಕ ಸಚಿವ ಮನೋಜ್‌ ಸಿನ್ಹಾ ತಿಳಿಸಿದ್ದಾರೆ. ಭೋಪಾಲದಲ್ಲಿ ರವಿವಾರ ಮಾತನಾಡಿದ ಅವರು, ವಾರದ ಒಳಗೆ ಕಂಪ್ಯೂಟರ್‌ ವ್ಯವಸ್ಥೆಗಳು ಸಿದ್ಧಗೊಳ್ಳಲಿವೆ. RBI ಅದರ ಮೇಲುಸ್ತುವಾರಿ ವಹಿಸಿಕೊಂಡಿದೆ ಎಂದು  ತಿಳಿಸಿದ್ದಾರೆ. ಅಂಚೆ ಬ್ಯಾಂಕ್‌ ಆರಂಭಿಸುವುದರಿಂದ ಎಲ್ಲರನ್ನೂ ಆರ್ಥಿಕ ಸಹಭಾಗಿತ್ವಕ್ಕೆ ಒಳಪಡಿಸುವ ಯೋಜನೆಗೆ ನೆರವಾಗಲಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next