Advertisement

ಅಂಚೆ ಬ್ಯಾಂಕ್‌ 21ಕ್ಕೆ 

10:57 AM Aug 06, 2018 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ ಭಾರತೀಯ ಅಂಚೆ ಪಾವತಿ ಬ್ಯಾಂಕ್‌(ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 21ರಂದು ಚಾಲನೆ ನೀಡಲಿದ್ದಾರೆ. ಗ್ರಾಮೀಣ ಭಾಗಗಳಿಗೆ ಆರ್ಥಿಕ ಸೇವೆಗಳು ತ್ವರಿತವಾಗಿ ಸಿಗುವಂತೆ ಸಹಕಾರಿಯಾಗಲು ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಶಾಖೆ ಇರುವಂತೆ ಯೋಜನೆ ರೂಪಿಸಲಾಗಿದೆ.

Advertisement

ಈಗಾಗಲೇ 2 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಬಾಕಿ 648 ಶಾಖೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಸುಮಾರು 1.55 ಅಂಚೆ ಕಚೇರಿ ಶಾಖೆಗಳಲ್ಲಿ ಆರ್ಥಿಕ ಸೇವೆ ಒದಗಿಸಲಾಗುವುದು. 17 ಕೋಟಿ ಅಂಚೆ ಸೇವಾ ಬ್ಯಾಂಕ್‌ಗಳ ಜೊತೆ ಐಪಿಪಿಬಿಯ ಖಾತೆಗಳನ್ನು ಜೋಡಿಸಲು ನಮಗೆ ಅನುಮತಿ ಇದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next