Advertisement

ರದ್ದಾಗುವ ಭೀತಿಯಲ್ಲಿ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್ ಪಂದ್ಯ

03:28 PM Oct 16, 2022 | Team Udayavani |

ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ರವಿವಾರ ಆರಂಭವಾಗಿದೆ. ಗ್ರೂಪ್ ಹಂತದ ಪಂದ್ಯಗಳು ಇಂದು ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ನಮೀಬಿಯಾ ತಂಡವು ಶ್ರೀಲಂಕಾಗೆ ಆಘಾತ ನೀಡಿದೆ. ಏಷ್ಯಾ ಕಪ್ ಚಾಂಪಿಯನ್ ಲಂಕಾ ಮೊದಲ ಪಂದ್ಯದಲ್ಲಿ 55 ರನ್ ಅಂತರದ ಸೋಲನುಭವಿಸಿದೆ.

Advertisement

ಗ್ರೂಪ್ ಹಂತದ ಪಂದ್ಯಗಳು ಒಂದು ವಾರ ನಡೆಯಲಿದೆ. ಮುಂದಿನ ರವಿವಾರ ( ಅ.23) ಸೂಪರ್ 12 ಹಂತದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗಲಿದೆ. ಮೆಲ್ಬರ್ನ್ ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಕ್ರಿಕೆಟ್ ವಿಶ್ವ ಕಾದು ಕುಳಿತಿದೆ. ರವಿವಾರ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

ಈ ಪಂದ್ಯದ ಎಲ್ಲಾ ಟಿಕೆಟ್ ಗಳು ಈಗಾಗಲೇ ಬಿಕರಿಯಾಗಿದೆ. ಆದರೆ ಇದೀಗ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ಆಸ್ಟ್ರೇಲಿಯಾದ ಹವಾಮಾನ ವರದಿಯ ಪ್ರಕಾರ ಅ.23ರಂದು ಮೆಲ್ಬರ್ನ್ ಮಳೆ ಬರುವ ಸಾಧ್ಯತೆ ಹೆಚ್ಚಿದೆ.

ಒಂದು ಸಂಪೂರ್ಣ ಮಳೆ ಕಾಡಿದರೆ ಪಂದ್ಯ ರದ್ದಾಗಲಿದೆ. ಕೂಟದ ನಿಯಮದ ಪ್ರಕಾರ ರದ್ದಾದ  ಪಂದ್ಯದಲ್ಲಿ ಉಭಯ ತಂಡಗಳೂ ತಲಾ ಒಂದು ಅಂಕ ಪಡೆಯಲಿದೆ. ಸೂಪರ್ 12 ಹಂತದಲ್ಲೂ ಯಾವುದೇ ಪಂದ್ಯಕ್ಕೆ ಮೀಸಲು ದಿನದ ವ್ಯವಸ್ಥೆ ಮಾಡಿಲ್ಲ.

ಇದನ್ನೂ ಓದಿ:ಮುಂಬಯಿ: ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ ಕುರಿತು ನಟಿ ದೂರು

Advertisement

ಪಾಕಿಸ್ಥಾನ ವಿರುದ್ಧದ ಪಂದ್ಯದ ಬಳಿಕ ಟೀಂ ಅಕ್ಟೋಬರ್ 27 ರಂದು ಎರಡನೇ ಪಂದ್ಯ ಎ ಗುಂಪಿನ ರನ್ನರ್ ಅಪ್, ಮೂರನೇ ಪಂದ್ಯ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ, ನಂತರ ನಾಲ್ಕನೇ ಪಂದ್ಯ ನವೆಂಬರ್ 2 ರಂದು. ಇನ್ನೊಂದು ನವೆಂಬರ್ 6 ರಂದು ಬಾಂಗ್ಲಾದೇಶದೊಂದಿಗೆ ಐದನೇ ಪಂದ್ಯವು ಬಿ ಗುಂಪಿನ ವಿಜೇತರೊಂದಿಗೆ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next