ಹೊಸದಿಲ್ಲಿ: ಏಷ್ಯಾಡ್ ಹಾಕಿ ಪಂದ್ಯಾ ವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ಒಂದೇ ಬಣದಲ್ಲಿವೆ. ಸೆ. 30ರಂದು ಈ ಬಿರುಸಿನ ಸ್ಪರ್ಧೆ ಏರ್ಪಡಲಿದೆ.
ಭಾರತ “ಎ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದೆ. ಇಲ್ಲಿನ ಉಳಿದ ತಂಡಗಳೆಂದರೆ ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಜ್ಬೆಕಿಸ್ಥಾನ. “ಬಿ’ ವಿಭಾಗದಲ್ಲಿ ಕೊರಿಯಾ, ಮಲೇಷ್ಯಾ, ಚೀನ, ಒಮಾನ್, ಥಾಯ್ಲೆಂಡ್, ಇಂಡೋನೇಷ್ಯಾ ತಂಡಗಳಿವೆ.
ವನಿತಾ ವಿಭಾಗದಲ್ಲೂ ಭಾರತ “ಎ’ ವಿಭಾಗದಲ್ಲಿದೆ. ದಕ್ಷಿಣ ಕೊರಿಯಾ, ಮಲೇಷ್ಯಾ, ಹಾಂಕಾಂಗ್ ಚೀನ ಮತ್ತು ಸಿಂಗಾಪುರ ಈ ವಿಭಾಗದ ಉಳಿದ ತಂಡಗಳು. “ಬಿ’ ವಿಭಾಗದಲ್ಲಿ ಜಪಾನ್, ಚೀನ, ಥಾಯ್ಲೆಂಡ್, ಕಜಕಸ್ಥಾನ ಮತ್ತು ಇಂಡೋನೇಷ್ಯಾ ಸ್ಥಾನ ಪಡೆದಿವೆ. ಭಾರತದ ವನಿತೆಯರು ಸೆ. 27ರಂದು ಸಿಂಗಾಪುರ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
ಎಲ್ಲ ಪಂದ್ಯಗಳು ಹಾಂಗ್‌ಝೂನ “ಗೊಂಗುÏ ಕನಾಲ್ ನ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಅ. 4ರಂದು ಪುರುಷರ ಸೆಮಿಫೈನಲ್ಸ್, ಅ. 5ರಂದು ವನಿತೆಯರ ಸೆಮಿಫೈನಲ್ಸ್ ನಡೆಯಲಿದೆ. ಪುರುಷರ ತಂಡದ ಫೈನಲ್ ಅ. 6ರಂದು, ವನಿತೆಯರ ಫೈನಲ್ ಅ. 7ರಂದು ಸಾಗಲಿದೆ.