Advertisement

ಭಾರತ-ಪಾಕಿಸ್ಥಾನ ಫೈನಲ್‌ ಹಣಾಹಣಿ

10:21 AM Oct 29, 2018 | |

ಮಸ್ಕತ್‌: ಹಾಲಿ ಚಾಂಪಿಯನ್‌ ಭಾರತದ ಪುರುಷರ ಹಾಕಿ ತಂಡ “ಏಶ್ಯನ್‌ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ನಲ್ಲಿ 3-2 ಗೋಲುಗಳಿಂದ ಜಪಾನ್‌ ವಿರುದ್ಧ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ತಡ ರಾತ್ರಿ ನಡೆಯುವ ಫೈನಲ್‌ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖೀಯಾಗಲಿವೆ.

Advertisement

ಭಾರತ-ಪಾಕಿಸ್ಥಾನ ಫೈನಲ್‌ನಲ್ಲಿ ಎದುರಾಗುತ್ತಿರುವುದು ಇದು 4ನೇ ಸಲ ಹಾಗೂ ಸತತ 2ನೇ ಸಲ. ಜಪಾನ್‌-ಮಲೇಶ್ಯ ತೃತೀಯ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ಥಾನ ಶೂಟೌಟ್‌ನಲ್ಲಿ ಮಲೇಶ್ಯವನ್ನು 3-1 ಗೋಲುಗಳಿಂದ ಸೋಲಿತ್ತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 4-4 ಸಮಬಲ ಸಾಧಿಸಿದ್ದವು.

ಜಪಾನ್‌ ವಿರುದ್ಧ ಸತತ ಜಯ
ರೌಂಡ್‌ ರಾಬಿನ್‌ ಲೀಗ್‌ನಲ್ಲಿ  ಭಾರತದ ವಿರುದ್ಧ 9-0 ಗೋಲುಗಳಿಂದ ಸೋತಿದ್ದ ಜಪಾನ್‌ ಸೆಮಿ ಪೈನಲ್‌ನಲ್ಲಿ ತೀವ್ರ ಪೈಪೋಟಿಯನ್ನೇ ನೀಡಿತು. ಆದರೆ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಭಾರತ ಮತ್ತೂಮ್ಮೆ ಜಪಾನ್‌ಗೆ ಆಘಾತವಿಕ್ಕಿತು.

ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟವನ್ನಾಡಿದವು. 19ನೇ ನಿಮಿಷದಲ್ಲಿ ಗುರ್ಜಂತ್‌ ಸಿಂಗ್‌ ಗೋಲು ಹೊಡೆಯುವ ಮೂಲಕ ಭಾರತಕ್ಕೆ ಮುನ್ನಡೆ ತಂದಿತ್ತರು. ಇದಾದ ಮೂರೇ ನಿಮಿಷದಲ್ಲಿ ಜಪಾನಿನ ಹಿರೋಟಕ ವಕಾರು ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಹೊಡೆದು ಪಂದ್ಯವನ್ನು ಸಮಬಲಕ್ಕೆ ತಂದರು. ಇಲ್ಲಿಂದ ಮುಂದೆ ಎರಡೂ ತಂಡಗಳು ಗೋಲಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಯಶಸ್ಸು ಕಾಣಲಿಲ್ಲ.
44ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಬಾಚಿಕೊಂಡ ಚಿಂಗ್ಲೆನ್ಸಾನ ಭಾರತಕ್ಕೆ 2ನೇ ಗೋಲಿನ ಕಾಣಿಕೆ ನೀಡಿದರು. ಅನಂತರ 55ನೇ ನಿಮಿಷದಲ್ಲಿ ದಿಲ್‌ ಪ್ರೀತ್‌ ಸಿಂಗ್‌ ಗೋಲು ಬಾರಿಸಿ 3-1 ಮುನ್ನಡೆ ಸಾಧಿಸಲು ನೆರವಾದರು. ಆದರೆ ಭಾರತದ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಜಪಾನ್‌ನ ಹಿರೋಟಕ ಜೆಂದಾನ ಪೆನಾಲ್ಟಿ ಕಾರ್ನರ್‌ ಮೂಲಕ 2ನೇ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು. ಅನಂತರ ರಕ್ಷಣಾತ್ಮಕವಾಗಿ ಆಟವಾಡಿದ ಭಾರತ ಎದುರಾಳಿಗೆ ಗೋಲು ಬಾರಿಸಿದಂತೆ ತಡೆಯವಲ್ಲಿ ಯಶಸ್ವಿಯಾಯಿತು. ಭಾರತಕ್ಕೂ ಮುನ್ನಡೆ ವಿಸ್ತರಿಸಲು ಸಾಧ್ಯವಾಗಲಿಲ್ಲ.

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಫೈನಲ್ಸ್‌
ವರ್ಷ    ಸ್ಥಳ    ಫೈನಲ್‌    ಫ‌ಲಿತಾಂಶ
2011    ಒರ್ಡೋಸ್   ಭಾರತ-ಪಾಕಿಸ್ಥಾನ     ಭಾರತಕ್ಕೆ 4-2 ಜಯ
2012    ಕತಾರ್‌    ಭಾರತ-ಪಾಕಿಸ್ಥಾನ         ಪಾಕಿಸ್ಥಾನಕ್ಕೆ 5-4 ಜಯ
2013    ಕಕಮಿಗಹಾರ   ಪಾಕಿಸ್ಥಾನ-ಜಪಾನ್‌    ಪಾಕಿಸ್ಥಾನಕ್ಕೆ 3-1 ಜಯ
2016    ಕೌಂಟಾನ್‌    ಭಾರತ-ಪಾಕಿಸ್ಥಾನ    ಭಾರತಕ್ಕೆ 3-2 ಜಯ

Advertisement
Advertisement

Udayavani is now on Telegram. Click here to join our channel and stay updated with the latest news.

Next