Advertisement

ಗಡಿಯಲ್ಲಿ ಮತ್ತೆ ಪಾಕ್‌ ಪುಂಡಾಟ

06:05 AM Mar 11, 2018 | |

ಶ್ರೀನಗರ: ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಭಾರತದ ವಿರುದ್ಧ ಕದನ ವಿರಾಮ ಉಲ್ಲಂಘನೆಯ ಆರೋಪ ಮಾಡಿದ್ದ ಪಾಕಿಸ್ತಾನ, ಅದರ ಮರುದಿನವೇ ಭಾರತದತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

Advertisement

ಶನಿವಾರ, ಜಮ್ಮು- ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ಸೇನಾನೆಲೆ ಮತ್ತು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆ ಶನಿವಾರ ಭಾರೀ ಶೆಲ್‌ ದಾಳಿ ನಡೆಸಿದೆ. ಆದರೆ, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಮಂಕೋಟೆ ವಲಯದ ಗಡಿಯಲ್ಲಿ ಬೆಳಗ್ಗೆ 7:40ರ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಶೆಲ್‌ ದಾಳಿ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ರಾಜ್ಯದ ರಜೌರಿ ಜಿಲ್ಲೆಯ ಮುರಾದ್‌ಪುರದಲ್ಲಿ ಜಮ್ಮು ಕಾಶ್ಮೀರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಎಸ್‌ಎಲ್‌ಎಸ್‌ಎ) ವತಿಯಿಂದ ಗಡಿಭಾಗದಲ್ಲಿ ಪಾಕಿಸ್ತಾನದ ಶೆಲ್‌ ದಾಳಿಗೀಡಾದ ದುರ್ದೈವಿಗಳಿಗೆ 9.92 ಲಕ್ಷ ರೂ.ಗಳ ಪರಿಹಾರ ವಿತರಿಸಲಾಯಿತು. ಅಲ್ಲದೆ, 200 ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗ್‌ ಹಾಗೂ ಪುಸ್ತಕಗಳು, ಗಣಿ ಕೆಲಸಗಾರರಿಗೆ 40 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ವರ್ಷದಲ್ಲಿ ಪಾಕಿಸ್ತಾನ ಇಂಥ ಅಪ್ರಚೋದಿತ ಗುಂಡಿನ ದಾಳಿಗೆ ಗಡಿಭಾಗದಲ್ಲಿರುವ ಭಾರತದ 21 ನಾಗರಿಕರು ಹಾಗೂ 12 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next