Advertisement

Population India ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ನಂ.1

04:09 PM Apr 19, 2023 | Team Udayavani |

ನವದೆಹಲಿ : ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನರೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಚೀನಾವನ್ನು ಹಿಂದಿಕ್ಕಿದೆ. ಇತ್ತೀಚಿನ ಅಂಕಿಅಂಶಗಳೊಂದಿಗೆ, ಚೀನಾ ಈಗ 142.57 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.

Advertisement

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡಾ 68 ರಷ್ಟು ಜನರು 15-64 ವಯಸ್ಸಿನವರು ಎಂದು ವರದಿ ಹೇಳುತ್ತದೆ.

ಭಾರತದ ಜನಸಂಖ್ಯೆಯ ಶೇಕಡಾ 25 ರಷ್ಟು 0-14 ವರ್ಷ ವಯಸ್ಸಿನ ನಡುವೆ, 18 ಪ್ರತಿಶತ 10-19 ವರ್ಷ ವಯಸ್ಸಿನ, 26 ರಷ್ಟು 10-24 ವರ್ಷ ವಯಸ್ಸಿನ ವ್ಯಾಪ್ತಿಯಲ್ಲಿದೆ ಎಂದು ಯುಎನ್‌ಎಫ್‌ಪಿ ತೋರಿಸಿದೆ.

ತಜ್ಞರ ಪ್ರಕಾರ, ಕೇರಳ ಮತ್ತು ಪಂಜಾಬ್‌ಗಳು ವಯಸ್ಸಾದ ಜನಸಂಖ್ಯೆಯನ್ನು ಹೊಂದಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರ ಅತೀ ಹೆಚ್ಚು ಯುವ ಜನಾಂಗವನ್ನು ಹೊಂದಿವೆ.

ವಿವಿಧ ಏಜೆನ್ಸಿಗಳು ನಡೆಸಿದ ಹಲವಾರು ಅಧ್ಯಯನಗಳು, ಭಾರತದ ಜನಸಂಖ್ಯೆಯು ಸುಮಾರು ಮೂರು ದಶಕಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದ್ದು 165 ಕೋಟಿಗೆ ತಲುಪಲಿದೆ , ನಂತರ ಅದು ಕುಸಿಯಲು ಪ್ರಾರಂಭವಾಗುತ್ತದೆ ಎಂದು ವರದಿಗಳ ಪ್ರಕಾರ ಹೇಳಲಾಗಿದೆ.

Advertisement

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA), ಭಾರತದ ಪ್ರತಿನಿಧಿ ಆಂಡ್ರಿಯಾ ವೊಜ್ನರ್, “ಭಾರತದ 1.4 ಶತಕೋಟಿ ಜನರನ್ನು 1.4 ಶತಕೋಟಿ ಅವಕಾಶಗಳಾಗಿ ನೋಡಬೇಕು. ಅತಿದೊಡ್ಡ ಯುವ ಸಮೂಹವನ್ನು ಹೊಂದಿರುವ ದೇಶವಾಗಿ, 254 ಮಿಲಿಯನ್ ಯುವಕರು (15-24 ವರ್ಷಗಳು)ನಾವೀನ್ಯತೆ, ಹೊಸ ಚಿಂತನೆ ಮತ್ತು ಶಾಶ್ವತ ಪರಿಹಾರಗಳ ಮೂಲವಾಗಿರಬಹುದು” ಎಂದು ಹೇಳಿದ್ದಾರೆ.

“ಮಹಿಳೆಯರು ಮತ್ತು ಹುಡುಗಿಯರು, ನಿರ್ದಿಷ್ಟವಾಗಿ, ಸಮಾನ ಶೈಕ್ಷಣಿಕ, ಕೌಶಲ್ಯ ನಿರ್ಮಾಣ ಅವಕಾಶಗಳು, ತಂತ್ರಜ್ಞಾನ, ಡಿಜಿಟಲ್ ಆವಿಷ್ಕಾರಗಳಿಗೆ ಪ್ರವೇಶ, ಮುಖ್ಯವಾಗಿ ತಮ್ಮ ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಆಯ್ಕೆಗಳನ್ನು ಸಂಪೂರ್ಣವಾಗಿ ಚಲಾಯಿಸುವ ಮಾಹಿತಿ ಮತ್ತು ಶಕ್ತಿಯನ್ನು ಹೊಂದಿದ್ದರೆ ಈ ಪಥವು ಮುಂದೆ ಸಾಗಬಹುದು” ಎಂದು ಯುಎನ್ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next