Advertisement
2019ರಲ್ಲಿ ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೊಳಿಸಿದ ಬಳಿಕ ವಿದೇಶದಲ್ಲಿರುವ ಉಗ್ರ ಸಂಘಟನೆಗಳು ಭಾರತದಲ್ಲಿದ್ದ ಕೆಲ ಸಂಘ ಟನೆ ಗಳಿಗೆ ಆರ್ಥಿಕ ಸಹಾಯದ ಜತೆಗೆ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ್ದವು. ಇದು ದೇಶದಲ್ಲಿರುವ ಸಂಘಟನೆಗಳು ಆರ್ಥಿಕ ಹಾಗೂ ತಾಂತ್ರಿಕವಾಗಿ ಸದೃಢಗೊಳ್ಳಲು ನೆರವಾಯಿತು.
Related Articles
ಪಿಎಫ್ಐ ನಿಷೇಧದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ದೇಶದಲ್ಲಿ ನಿಷೇಧಿತ ಸಂಘಟನೆಗಳ ಸಂಪರ್ಕದಲ್ಲಿರುವ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗತೊಡಗಿವೆ. ಇಷ್ಟು ದಿನಗಳ ಕಾಲ ಕೆಲ ವಿವಿಧ ಸಂಘಟನೆಗಳ ನೆರಳಿನಲ್ಲಿ ಕೆಲ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿದ್ದ ಸ್ಲೀಪರ್ ಸೆಲ್‌ಗಳು, ಈಗ ಮುನ್ನೆಲೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
Advertisement
ಪಿಎಫ್ಐ ಕೆಲವು ಮುಖಂಡರು ಹಾಗೂ ಸದಸ್ಯರು ದುಬೈ ಮತ್ತು ಕತಾರ್‌ಗೆ ಹೋಗಿ ಟರ್ಕಿ, ಸಿರಿಯಾದ ಕೆಲ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಕೆಲವರು ಇಸ್ತಾಂಬುಲ್‌ಗೂ ಹೋಗಿಅಲ್-ಖೈದಾ ಸಂಸ್ಥೆಗೆ ಸೇರಿದ ಚಾರಿಟಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆತಿಥ್ಯವನ್ನೂ ಸ್ವೀಕರಿಸಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ತನಿಖಾ ಸಂಸ್ಥೆಗಳು ವಿದೇಶದಲ್ಲಿರುವ ಉಗ್ರ ಸಂಘಟನೆಗಳ ಚಟುವಟಿಕೆಗಳಲ್ಲದೇ, ದೇಶದಲ್ಲಿರುವ ನಿಷೇಧಿತ ಸಂಘಟನೆಗಳ ಸ್ಲಿàಪರ್ ಸೆಲ್‌ಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ದುಬೈ ವ್ಯಕ್ತಿಗಳೊಡನೆ ಸಂಪರ್ಕಇತ್ತೀಚೆಗೆ ಎನ್‌ಐಎ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಬೆಂಗಳೂರಿನ 7 ಮಂದಿ ಪಿಎಫ್ಐ ಮುಖಂಡರು ದುಬಾೖಯ ಕೆಲವು ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಜತೆಗೆ “ಹವಾಲಾ’ ಹಣ ವರ್ಗಾವಣೆ ನಡೆದಿರುವುದು ಖಾತ್ರಿಯಾಗಿದೆ. ಹೀಗಾಗಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ. - ಮೋಹನ್ ಭದ್ರಾವತಿ