Advertisement

ಇಂಡಿಯಾ ಓಪನ್‌: ಸಿಂಧು ಸೆಮಿಫೈನಲಿಗೆ

12:24 PM Apr 01, 2017 | Harsha Rao |

ಹೊಸದಿಲ್ಲಿ: ತೀವ್ರ ಪೈಪೋಟಿಯಿಂದ ಸಾಗಿದ ಹೋರಾಟದಲ್ಲಿ ಸೈನಾ ನೆಹ್ವಾಲ್‌ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿದ ರಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಪಿವಿ ಸಿಂಧು ಅವರು ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದರು.

Advertisement

ಭಾರತದ ಇಬ್ಬರು ಖ್ಯಾತ ಶಟ್ಲರ್‌ಗಳ ಈ ಸೆಣಸಾಟದಲ್ಲಿ ಸಿಂಧು 21-16, 22-20 ಗೇಮ್‌ಗಳಿಂದ ಗೆಲುವು ಒಲಿಸಿಕೊಂಡರು. ಸೆಮಿಫೈನಲ್‌ನಲ್ಲಿ ಸಿಂಧು ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್‌ ಜಿ ಹ್ಯುನ್‌ ಅವರನ್ನು ಎದುರಿಸಲಿದ್ದಾರೆ. 

ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ ಮತ್ತು ಸಿಂಧು ಈ ಹಿಂದೆ ಒಮ್ಮೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮುಖಾಮುಖೀಯಾಗಿದ್ದರು. 2014ರ ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಕೂಟದಲ್ಲಿ ಸೈನಾ ನೇರ ಗೇಮ್‌ಗಳಿಂದ ಸಿಂಧು ಅವರನ್ನು ಸೋಲಿಸಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಪಿಬಿಎಲ್‌ ಕೂಟದಲ್ಲೂ ಅವರಿಬ್ಬರು ಮುಖಾಮುಖೀಯಾಗಿದ್ದು ಸಿಂಧು ಮೇಲುಗೈ ಸಾಧಿಸಿದ್ದರು.  2013ರ ಇಂಟಿಯನ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲೂ ಅವರಿಬ್ಬರು ಪರಸ್ಪರ ಮುಖಾಮುಖೀಯಾಗಿದ್ದು ಸೈನಾ ಜಯಭೇರಿ ಸಾಧಿಸಿದ್ದರು.

ಈ ಮೊದಲು ನಡೆದ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್‌ ಜಿ ಹ್ಯುನ್‌ ಅವರು ಹಾಲಿ ಚಾಂಪಿಯನ್‌ ಐದನೇ ಶ್ರೇಯಾಂಕದ ರಚನಾಕ್‌ ಇಂತನಾನ್‌ ಅವರನ್ನು 21-16, 22-20 ಗೇಮ್‌ಗಳಿಂದ ಸೋಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next