Advertisement

ಫೈನಲ್‌ಗೆ ಮೇರಿ; ಶಿವ ಥಾಪ ಪರಾಜಯ

06:10 AM Feb 01, 2018 | |

ಹೊಸದಿಲ್ಲಿ: ಐದು ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಹೊಸದಿಯಲ್ಲಿ ನಡೆಯುತ್ತಿರುವ “ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಮೆಂಟ್‌’ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ  ಶಿವ ಥಾಪ ಮತ್ತು ಮನೋಜ್‌ ಕುಮಾರ್‌ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

Advertisement

ವಿಶ್ವ ವನಿತಾ ಬಾಕ್ಸಿಂಗ್‌ನಲ್ಲಿ 12ನೇ ಶ್ರೇಯಾಂಕಿತೆ ಮೇರಿ ಕೋಮ್‌ 48 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಅಲ್ತಾನ್ಸೆಸೆಗ್‌ ಲುಸೈಖಾನ್‌ ವಿರುದ್ಧ ಜಯ ಸಾಧಿಸಿದರು. ಅವರು ಮೊದಲೆರಡು ಸುತ್ತುಗಳಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದರು. ಆದರೆ ಆಕ್ರಮಣಕಾರಿ ದಾಳಿ ನಡೆಸಿದ ಮೇರಿ ಕೋಮ್‌ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಮೇರಿ ಫಿಲಿಪ್ಪೀನ್ಸ್‌ನ ಜೋಸಿ ಗಬುಕೊ ವಿರುದ್ಧ ಸ್ಪರ್ಧಿಸಲಿದ್ದಾರೆ.

ಪುರುಷರ 60 ಕೆ.ಜಿ. ವಿಭಾಗದಲ್ಲಿ ಏಷ್ಯನ್‌ ಪದಕ ವಿಜೇತ ಶಿವ ಥಾಪ ಭಾರತದವರೇ ಆದ ಮನೀಷ್‌ ಕೌಶಿಕ್‌ ವಿರುದ್ಧ ಸೋತರು. ಇಬ್ಬರ ನಡುವೆಯೂ ಪ್ರಬಲ ಸ್ಪರ್ಧೆ ನಡೆಯಿತಾದರೂ ಅಂತಿಮ ಫ‌ಲಿತಾಂಶ ಮನೀಷ್‌ ಪರವಾಯಿತು.
ಆದರೆ ಕಾಮನ್ವೆಲ್ತ್‌ ಚಿನ್ನದ ಪದಕ ವಿಜೇತ ಮನೀಷ್‌ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಮತ್ತೂಂದು ಪಂದ್ಯದಲ್ಲಿ ಅವರು ದಿನೇಶ್‌ ಎದುರು ಸೋತು ಹೊರನಡೆಯಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next