Advertisement
ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಥಾಯ್ಲೆಂಡ್‌ನ ಕುನ್ಲಾವುತ್ ವಿದಿತ್ಸರ್ನ್ ಗೆದ್ದರು. ಅವರು ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 22-20, 10-21, 21-12 ಅಂತರದ ಗೆಲುವು ಸಾಧಿಸಿದರು. ಇವರಿಬ್ಬರ ಹೋರಾಟ 64 ನಿಮಿಷಗಳ ತನಕ ಸಾಗಿತು. ಇದು ವಿದಿತ್ಸರ್ನ್ ಗೆದ್ದ ಮೊದಲ “ಸೂಪರ್ 750′ ಬ್ಯಾಡ್ಮಿಂಟನ್ ಪ್ರಶಸ್ತಿ
ಕಳೆದ ವಾರವಷ್ಟೇ “ಮಲೇಷ್ಯಾ ಓಪನ್’ ಫೈನಲ್‌ನಲ್ಲಿ ಇವರಿಬ್ಬರು ಮುಖಾಮುಖೀಯಾಗಿದ್ದರು. ಅಲ್ಲಿ ಇದೇ ರೀತಿ, 3 ಗೇಮ್‌ಗಳ ಹೋರಾಟದಲ್ಲಿ ಅಕಾನೆ ಯಮಾಗುಚಿ ಗೆದ್ದು ಬಂದಿದ್ದರು. ಮೊದಲ ಗೇಮ್ ಕಳೆದುಕೊಂಡ ಬಳಿಕ ಯಮಾಗುಚಿ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ “ಇಂಡಿಯನ್ ಓಪನ್’ ಫೈನಲ್‌ನಲ್ಲಿ ಇವರಿಬ್ಬರ ಮುಖಾಮುಖೀ ತೀವ್ರ ಕುತೂಹಲ ಮೂಡಿಸಿತ್ತು. ಇಲ್ಲಿ ಯಂಗ್ ಆ್ಯನ್ ಸೆಯಂಗ್ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು. “ಇದು ಮತ್ತೂಂದು ದೊಡ್ಡ ಕದನವಾಗಲಿದೆ ಎಂಬುದು ತಿಳಿದಿತ್ತು. ಇದಕ್ಕೆ ಮಾನಸಿಕವಾಗಿ ನಾನು ಸಜ್ಜುಗೊಂಡಿದ್ದೆ’ ಎಂಬುದಾಗಿ 72 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದ ಆ್ಯನ್ ಸೆಯಂಗ್ ಪ್ರತಿಕ್ರಿಯಿಸಿದರು. ಇದರೊಂದಿಗೆ ಯಮಾಗುಚಿ ವಿರುದ್ಧ ಆಡಿದ 16 ಪಂದ್ಯಗಳಲ್ಲಿ ಆ್ಯನ್ ಸೆಯಂಗ್ 6ನೇ ಗೆಲುವು ಕಂಡಂತಾಯಿತು. ವನಿತಾ ಡಬಲ್ಸ್ ಪ್ರಶಸ್ತಿ ಜಪಾನ್‌ನ ನಾಮಿ ಮತ್ಸುಯಾಮ-ಚಿಹರು ಶಿಡಾ ಪಾಲಾಯಿತು.
Related Articles
ವಿಶ್ವದ 11ನೇ ರ್‍ಯಾಂಕಿಂಗ್ ಆಟಗಾರರಾದ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಇವರು ಮಲೇಷ್ಯಾದ ಆರನ್ ಚಿಯ-ಸೋಹ್ ವೂಯಿ ಯಿಕ್ ಜೋಡಿಗೆ 14-21, 21-19, 21-18 ಅಂತರದ ಸೋಲುಣಿಸಿದರು. ಜಪಾನ್‌ನ ಯುಟ ವಟಾನಬೆ-ಅರಿಸಾ ಹಿಗಶಿನೊ ಮಿಶ್ರ ಡಬಲ್ಸ್ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಎದುರಾಳಿಗಳಾದ ಚೀನೀ ಆಟಗಾರರು ಗಾಯಾಳದ ಕಾರಣ ವನಿತಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಫೈನಲ್ ಸ್ಪರ್ಧೆ ನಡೆಯಲಿಲ್ಲ.
Advertisement