Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

10:59 PM Jan 16, 2022 | Team Udayavani |

ಹೊಸದಿಲ್ಲಿ: ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ಅವಳಿ ಪ್ರಶಸ್ತಿಗಳೊಂದಿಗೆ ಸಂಭ್ರಮಿಸಿದೆ. ಯುವ ಶಟ್ಲರ್‌ ಲಕ್ಷ್ಯ ಸೇನ್‌ ಸಿಂಗಲ್ಸ್‌ ಹಾಗೂ ಚಿರಾಗ್‌ ಶೆಟ್ಟಿ- ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದರು. ಇಬ್ಬರದೂ ನೇರ ಗೇಮ್‌ ಗೆಲುವಾಗಿತ್ತು.

Advertisement

ಸಿಂಗಲ್ಸ್‌ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ಸಿಂಗಾಪುರದ ಲೋಹ್‌ ಕೀನ್‌ ವ್ಯೂ ವಿರುದ್ಧ ಲಕ್ಷ್ಯ ಸೇನ್‌ ಅಮೋಘ ಪ್ರದರ್ಶನ ನೀಡಿ 24-22, 21-17ರಿಂದ ಮೇಲುಗೈ ಸಾಧಿಸಿದರು.

ಇದು ಸೇನ್‌ಗೆ ಒಲಿದ ಮೊದಲ “ಸೂಪರ್‌-500′ ಬ್ಯಾಡ್ಮಿಂಟನ್‌ ಪ್ರಶಸ್ತಿ. ಕಳೆದ ವರ್ಷದ ಡಚ್‌ ಓಪನ್‌ ಫೈನಲ್‌ನಲ್ಲಿ ವ್ಯೂ ವಿರುದ್ಧ ಸೋಲನುಭವಿಸಿದ್ದ ಸೇನ್‌ ಇಲ್ಲಿ ಸೇಡು ತೀರಿಸಿಕೊಂಡರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಚಿರಾಗ್‌-ರಾಂಕಿರೆಡ್ಡಿ ಸಾಹಸ
ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ ಡಬಲ್ಸ್‌ ಫೈನಲ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ 3 ಬಾರಿಯ ವಿಶ್ವ ಚಾಂಪಿಯನ್‌ ಜೋಡಿಯಾದ ಇಂಡೋನೇಶ್ಯದ ಮೊಹಮ್ಮದ್‌ ಅಹ್ಸಾನ್‌-ಹೆಂಡ್ರ ಸೆತಿಯವಾನ್‌ ವಿರುದ್ಧ 21-16, 26-24 ಅಂತರದ ಸಾಹಸಮಯ ಗೆಲುವು ಸಾಧಿಸಿದರು. ಇವರೆದುರಿನ 5 ಪಂದ್ಯಗಳಲ್ಲಿ ಭಾರತದ ಜೋಡಿಗೆ ಒಲಿದ ಕೇವಲ 2ನೇ ಜಯ ಇದಾಗಿದೆ. 43 ನಿಮಿಷಗಳ ಕಾಲ ಇವರ ಸ್ಪರ್ಧೆ ಸಾಗಿತು.ವಿಶ್ವದ 10ನೇ ರ್‍ಯಾಂಕಿಂಗ್‌ ಜೋಡಿ ಯಾದ ಚಿರಾಗ್‌-ರಾಂಕಿರೆಡ್ಡಿಗೆ ಒಲಿದ ಎರಡನೇ ಸೂಪರ್‌-500 ಪ್ರಶಸ್ತಿ ಇದಾಗಿದೆ. ಮೊದಲ ಪ್ರಶಸ್ತಿಯನ್ನು 2019ರ ಥಾಯ್ಲೆಂಡ್‌ ಪಂದ್ಯಾವಳಿಯಲ್ಲಿ ಜಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next