Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಹಿಂದೆ ಸರಿದ ಇಂಗ್ಲೆಂಡ್‌

10:45 PM Jan 09, 2022 | Team Udayavani |

ಹೊಸದಿಲ್ಲಿ: ತಂಡದ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದ ಕಾರಣ ಇಂಗ್ಲೆಂಡ್‌ ತಂಡ “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಬಿಎಐ) ರವಿವಾರ ಇದನ್ನು ಪ್ರಕಟಿಸಿತು.

Advertisement

ತಂಡದ ಡಬಲ್ಸ್‌ ಸ್ಪೆಷಲಿಸ್ಟ್‌ ಸೀನ್‌ ವೆಂಡಿ ಮತ್ತು ಕೋಚ್‌ ನಥನ್‌ ರಾಬರ್ಟ್‌ಸನ್‌ ಅವರ ಕೋವಿಡ್‌ ವರದಿ ಪಾಸಿಟಿವ್‌ ಬಂದಿದೆ. ಹೀಗಾಗಿ ಇಂಗ್ಲೆಂಡ್‌ ಎರಡು ದಿನಗಳ ಹಿಂದೆಯೇ ಈ ನಿರ್ಧಾರಕ್ಕೆ ಬಂದಿತ್ತು ಎಂದು ಬಿಎಐ ತಿಳಿಸಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹೊರತಾಗಿಯೂ ಹೊಸದಿಲ್ಲಿಯಲ್ಲಿ ಜ. 11ರಿಂದ 16ರ ತನಕ 400,000 ಡಾಲರ್‌ ಬಹುಮಾನದ ಈ ಸೂಪರ್‌ 500 ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ:ಅಭ್ಯಾಸಕ್ಕೆ ಇಳಿದ ಕೊಹ್ಲಿ: ನಿರ್ಣಾಯಕ ಮೂರನೇ ಟೆಸ್ಟ್‌ಗೆ ಮರಳುವ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next