Advertisement

ರಕ್ಷಣಾ ಸಾಮಗ್ರಿ ಖರೀದಿಸಲು ಮಾರಿಷಸ್‌ಗೆ 724 ಕೋಟಿ ರೂ. ಸಾಲ

11:08 PM Feb 22, 2021 | Team Udayavani |

ಪೋರ್ಟ್‌ ಲೂಯೀಸ್‌: ಸಮುದ್ರ ಗಡಿ ವ್ಯಾಪ್ತಿಯಲ್ಲಿ ಬರುವ ಮಾರಿಷಸ್‌ ರಾಷ್ಟ್ರಕ್ಕೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ ಭಾರತ 724.71 ಕೋಟಿ ರೂ. ಸಾಲ ನೀಡಿದೆ.

Advertisement

ಈ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗನೌತ್‌, ಸಮಗ್ರ ಆರ್ಥಿಕ ಸಹಕಾರ ಸಹಭಾಗಿತ್ವ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದ್ದಾರೆ. ಇದರ ಅನ್ವಯ, ಮಾರಿಷಸ್‌ ತನ್ನ ಸಾರ್ವಭೌಮತ್ವ ರಕ್ಷಣೆಗೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಭಾರತದಿಂದ ಖರೀದಿಸಬಹುದು. ಅಲ್ಲದೆ ಭಾರತದ ಎಚ್‌ಎಎಲ್‌ ನಿರ್ಮಿಸಿರುವ ನೌಕಾ ಪಡೆಯ ಯುದ್ಧ ವಿಮಾನ ಡಾರ್ನಿಯರ್‌, ಸುಧಾರಿತ ಹಗುರ ಹೆಲಿಕಾಪ್ಟರ್‌ “ಧ್ರುವ್‌’ ಅನ್ನು ಮಾರಿಷಸ್‌ 2 ವರ್ಷಗಳ ಮಟ್ಟಿಗೆ ಉಚಿತವಾಗಿ ಗಸ್ತು ಪ್ರಕ್ರಿಯೆಗೆ ಬಳಸಿಕೊಳ್ಳಬಹುದು.

ಸಮುದ್ರಸೀಮೆ ವ್ಯಾಪ್ತಿಯ ದ್ವೀಪ ರಾಷ್ಟ್ರಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ “ಸಾಗರ್‌ ಪಾಲಿಸಿ’ ಅಡಿಯಲ್ಲಿ ಮಾರಿಷಸ್‌ಗೆ ಈ ನೆರವು ನೀಡಲಾಗಿದೆ.

ಇದನ್ನೂ ಓದಿ:ಅಮೇಠಿಯಲ್ಲಿ ಸ್ಮೃತಿ ಸ್ವಂತ ನಿವೇಶನ; ರಾಹುಲ್‌ಗೆ ಮುಜುಗರ

Advertisement

Udayavani is now on Telegram. Click here to join our channel and stay updated with the latest news.

Next